ಡೈಲಿ ವಾರ್ತೆ:08 ಮಾರ್ಚ್ 2023

ಟೀಮ್ ಭವಾಬ್ಧಿ ಪಡುಕರೆ ಸಂಘಟನೆಯಿಂದ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ರಿಗೆ ಹುಟ್ಟೂರ ಸನ್ಮಾನ:
ಸಮಾಜದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ : ಸಚಿವ ಕೋಟ

ಕೋಟ: ಸಮಾಜದಲ್ಲಿ ಬದಲಾವಣೆ ಸಹಜ ಆದರೆ ಅದನ್ನೆ
ದುರುಪಯೋಗಿಸಿಕೊಂಡು ಸಾಮಾಜಿಕ ನ್ಯಾಯವನ್ನು ಮರೆಮಾಚುವ ಕೃತ್ಯ ಈ ಸಮಾಜ ಎಂದು ಸಹಿಸುದಿಲ್ಲ ಎಂದು ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಇವರು ಕೋಟತಟ್ಟು ಪಡುಕರೆ ಟೀಮ್ ಭವಾಬ್ಧಿ ಆಯೋಜಿಸಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪ್ರಸ್ತುತ ವಿದ್ಯಾಮಾನಕ್ಕೂ ಹಿಂದಿನ ವಿದ್ಯಾಮಾನಕ್ಕೂ ಅಜಗಜಾಂತರ ವ್ಯತ್ಯಾಸಗಳನ್ನು ನಾವುಗಳು ಕಾಣುತ್ತಿದೆ ಮೊದಲು ವಿದ್ಯಾವಂತರು ಕಡಿಮೆ ಇದ್ದರೂ ಅನಾಗರೀಕತ್ವ
ಸಹಜವಾಗಿ ಕಾಡುತ್ತಿದ್ದವು ಆದರೆ ಇಂದು ದೇಶ್ಯಾದ್ಯಂತ ಶೇ.90ರಷ್ಟು ವಿದ್ಯಾವಂತರು ಇದ್ದರೂ ಅದರ ಪ್ರಮಾಣ ಹೆಚ್ಚಿಸಿವೆ ಇದು ಖೇಧಕರ ಬೆಳವಣಿಗೆಯಾಗಿದೆ. ಮನುಷ್ಯ ಜೀವಿ
ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಋಣ ತಿರಿಸುವ ಕೆಲಸ ಮಾಡಬೇಕು ಅದು
ಸಮಾಜದ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿ
ಕಾರ್ಯೋನ್ಮುಖವಾಗಬೇಕು, ಸ್ವಾತಂತ್ರ್ಯ ಬಂದು 75 ಸಂವತ್ಸರ
ಕಳೆಯುತ್ತಿದ್ದೇವೆ ಇಂದಿಗೂ ಅಲ್ಲಲ್ಲಿ ಅಸ್ಪ್ರಷ್ಯತೆ ಎದ್ದುಕಾಣುತ್ತಿದೆ ಇದನ್ನು ಹೊಗಲಾಡಿಸಬೇಕಾದ ಅಗತ್ಯತೆ ಇದೆ. ಸರಕಾರ ಈಗಾಗಲೇ ಈ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು
ರೂಪಿಸಿವೆ. ಗ್ರಾಮೀಣ ಭಾಗಗಳಲ್ಲಿ ಸಂಘಟನೆಗಳು ಅತಿ ಹುಮ್ಮಸ್ಸಿನಿಂದ ಸಮಾಜಮುಖಿ ಕಾರ್ಯದತ್ತ ಕಾರ್ಯನಿರ್ವಹಿಸುತ್ತಿದೆ ಇದಕ್ಕೆ ಟೀಮ್ ಭವಾಬ್ಧಿ ತಂಡದ ಯುವ ಸಮೂಹವೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.



ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ
ಆನಂದ್ ಸಿ ಕುಂದರ್ ಉದ್ಘಾಟಿಸಿ ಅವರು ಮಾತನಾಡಿ ಮಾನಸಿಕ ಅಸ್ವಸ್ಥತೆಯ ವಿರುದ್ಧ ಜಾಗೃತಿ ಮೂಡಿಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿ ತನ್ನ ವೈದ್ಯ ಸೇವೆ ದೇವರ ಸೇವೆ ಅಂದುಕೊಂಡು ಕಾರ್ಯನುರ್ವಹಿಸುತ್ತಿರುವ
ಡಾ.ಪ್ರಕಾಶ್ ತೋಳಾರ್ ಹುಟ್ಟೂರ ಸನ್ಮಾನ ಅರ್ಥಪೂರ್ಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಟೀಮ್ ಭವಾಬ್ಧಿ
ಸಮಾಜದ ಹಿತಕಾಯುವುದರೊಂದಿಗೆ ಮತ್ತಷ್ಟು ಸಾಮಾಜಿಕ
ಚಿಂತನೆಗಳನ್ನು ಪಸರಿಸಿಕೊಳ್ಳಲಿ ಎಂದು ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಟೀಮ್ ಭವಾಬ್ಧಿ ತಂಡದ ಮುಖ್ಯಸ್ಥ ಪ್ರಸಾದ್ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಇವರಿಗೆ ಹುಟ್ಟೂರ ಅಭಿನಂದನೆ ಸಲ್ಲಿಸಲಾಯಿತು.
ಅಲ್ಲದೆ ಕರಾವಳಿಯ ಕಾಯಕ ದೀವಿಗೆಗಳಾದ ನಂದಿ ಕಾಂಚನ್, ಕೆ. ಶಿವಮೂರ್ತಿ, ರಾಜು ಪೂಜಾರಿ, ಯಶೋಧ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಅಭ್ಯಾಗತರಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಾರ್ಯವಾಹಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಕೆರಾಡಿ ಚಂದ್ರಶೇಖರ ಶೆಟ್ಟಿ ಕೊಲ್ಲೂರು, ಮುನಿಯಲ್ ಉದಯಕುಮಾರ್ ಶೆಟ್ಟಿ, ಬಿಜು ನಾಯರ್ ಮತ್ತಿತರರು
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣೇಶ್ ತಿಂಗಳಾಯ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ನಂತರ ಕೊಡಿಯಾಲ್‍ಬೈಲ್ ನಿರ್ದೇಶನದ ಶಿವದೂತ ಗುಳಿಗ ನಾಟಕ
ಪ್ರದರ್ಶನಗೊಂಡಿತು.