ಡೈಲಿ ವಾರ್ತೆ:10 ಮಾರ್ಚ್ 2023

H3 N2 ವೈರಲ್ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಹಾಸನ ಮೂಲದ 85 ವರ್ಷದ ವೃದ್ಧ ಸಾವು

ಬೆಂಗಳೂರು; 2020ರ ಮಾರ್ಚ್ ನಂತರ 2021ರವರೆಗೆ ಕೋವಿಡ್ ಸೋಂಕಿನ ಮಹಾಮಾರಿಗೆ ಸಾಕಷ್ಟು ಸಾವು ನೋವುಗಳನ್ನು ನೋಡಿದ್ದೇವೆ. ಕೊರೋನಾ ಬಳಿಕ ರಾಜ್ಯದಲ್ಲಿ ಈ ವರ್ಷ ಇತ್ತೀಚೆಗೆ ಹೆಚ್ 3 ಎನ್ 2 ವೈರಲ್ ಸೋಂಕು ಕಾಲಿಟ್ಟಿದೆ. ಇದು ಆತಂಕ ಮೂಡಿಸಿದ್ದು ಶೀತ, ಜ್ವರ ಬೇಸಿಗೆಯಲ್ಲಿ ಸಾಕಷ್ಟು ಜನರನ್ನು ಕಾಡುತ್ತಿದೆ.

ಅದರೊಟ್ಟಿಗೆ ಇದೀಗ ಹೆಚ್3 ಎನ್ 2 ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ. H3N2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H3N2 ಸೋಂಕು ದೃಢಪಟ್ಟಿದೆ ಎಂದು ಆಯುಕ್ತರು ತಿಳಿಸಿದ್ದಾರೆ.