



ಡೈಲಿ ವಾರ್ತೆ:14 ಮಾರ್ಚ್ 2023


ದರೋಡೆ ಹಾಗೂ ಮನೆ ಕಳ್ಳತನ ಪ್ರಕರಣ: ಕೊಡಗಿನ ಬಿಜೆಪಿ ಮುಖಂಡ ಸೇರಿ ಮೂವರ ಬಂಧನ.!


ಮಡಿಕೇರಿ: ದರೋಡೆ ಹಾಗೂ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೈಸ್ಕೂಲ್ ಪೈಸಾರಿ ನಿವಾಸಿ ಹಾಗೂ ಬಿಜೆಪಿ ಪಕ್ಷದ ಬೂತ್ ಅಧ್ಯಕ್ಷ ಶಾಜಿ, ಕೇರಳದ ಶ್ರೀತು ಮತ್ತು ಶರೀಫ್ ಎಂಬ ಮೂವರನ್ನು ಗೋವಾ ಪೊಲೀಸ್ ವರಿಷ್ಠಾಧಿಕಾರಿ ರಾಜಶೇಖರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ದತ್ತಾರಾಮ್ ತಂಡ ಬಂಧಿಸಿ ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ.
ಪ್ರವಾಸಿ ತಾಣಗಳ ಮನೆ, ರೆಸಾರ್ಟ್ ಮತ್ತು ವಾಸದ ಮನೆಗಳನ್ನು ಗುರಿಯಾಗಿಸಿ ಕೋಟ್ಯಾಂತರ ರೂಪಾಯಿಗಳ ಕಳ್ಳತನ ಮಾಡುತ್ತಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಧಿತರಿಂದ ಅಪಾರ ಪ್ರಮಾಣದ ನಗದು ಹಾಗೂ ಬೆಲೆ ಬಾಳುವ ಕ್ಯಾಮರಾ, ಲ್ಯಾಪ್‌ಟಾಪ್, ಆಭರಣ ಹಾಗೂ ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.