ಡೈಲಿ ವಾರ್ತೆ:14 ಮಾರ್ಚ್ 2023

ಪೆಟ್ರೋಲ್ ಸುರಿದು ಪತ್ನಿ, ಮೂವರು ಪುತ್ರಿಯರಿಗೆ ಬೆಂಕಿ ಹಚ್ಚಿದ ಪತಿ: ಆರೋಪಿಗಾಗಿ ಹುಡುಕಾಟ

ಮಧುಗಿರಿ: ತಾಲ್ಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳ ಮೇಲೆ ಸೋಮವಾರ ಬೆಳಗಿನ ಜಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ರಾಮಾಂಜನಪ್ಪ ಈ ಕೃತ್ಯ ಎಸಗಿದ್ದಾನೆ. ಆತನ ಪತ್ನಿ ಶಾಂತಮ್ಮ (35) ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮಕ್ಕಳಾದ ಅಕ್ಷಯಾ (17) ಅಕ್ಷತಾ (13) ಮತ್ತು ಅಮೃತಾ (10) ಅವರನ್ನು ಗ್ರಾಮಸ್ಥರು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾನುವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿತ್ತು. ಮೂವರು ಮಕ್ಕಳೊಂದಿಗೆ ಮಲಗಿದ್ದ ಪತ್ನಿ ಶಾಂತಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ರಾಮಾಂಜನಪ್ಪ ಬಾಗಿಲಿಗೆ ಚಿಲಕ ಹಾಕಿ ಪರಾರಿಯಾಗಿದ್ದಾನೆ.
ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ