ಡೈಲಿ ವಾರ್ತೆ:15 ಮಾರ್ಚ್ 2023

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕೆ.ಆರ್.ಎಸ್ ಪಕ್ಷದಿಂದ ನೀಲಗುಂದದ ಈಡಿಗರ ಕರಿಬಸಪ್ಪ ಸ್ಪರ್ಧೆ

  • ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಲಗುಂದದ ಈಡಿಗರ ಕರಿಬಸಪ್ಪ ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ

ಹರಪನಹಳ್ಳಿ :(ವಿಜಯನಗರ ಜಿಲ್ಲೆ):- ಕೆ.ಆರ್.ಎಸ್. ಪಕ್ಷದ ರೈತ ಘಟಕ ಜಿಲ್ಲಾಧ್ಯಕ್ಷ ಈಡಿಗರ ಕರಿಬಸಪ್ಪ ಅವರನ್ನು ಹರಪನಹಳ್ಳಿ ವಿದಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯೆಂದು ಪಕ್ಷ ಘೋಷಿಸಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಚಲವಾದಿ ಆನಂದ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಲಂಚ ಮುಗಿಲು ಮುಟ್ಟಿದ್ದು, ಹಣ ಕೊಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ ಎಂದು ದೂರಿದರು.

ಸಂಭಾವ್ಯ ಅಭ್ಯರ್ಥಿ ಈಡಿಗರ ಕರಿಬಸಪ್ಪ ಮಾತನಾಡಿ ‘ಜನಸಾಮಾನ್ಯರ ಪರ ಕೆಲಸ ಮಾಡುವ ಪಕ್ಷದ ಕಾರ್ಯಕರ್ತರ ಮೇಲೆ ಎಷ್ಟೇ ದೂರುಗಳು ದಾಖಲಾದರು, ಎದೆಗುಂದದೇ ಜನ ಪರವಾದ ಹೋರಾಟ ಮುಂದುವರೆಸಿದ್ದೇವೆ’ ಎಂದರು.

ಸ್ವಚ್ಛ ಹಾಗೂ ಜನಪರ ಆಡಳಿತಕ್ಕಾಗಿ ಕೆ.ಆರ್‌.ಎಸ್ ಪಕ್ಷ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಹೋರಾಟ ಮಾಡುತ್ತ ಬಂದಿದ್ದೇವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತಾಲ್ಲೂಕಿನ ನೀಲಗುಂದ ಗ್ರಾಮವಾಸಿ ಈ ತಾಲ್ಲೂಕಿನ ಸ್ಥಳೀಯರಾಗಿರುವ ನನ್ನನ್ನು ಕೆ.ಆರ್.ಎಸ್ ಪಕ್ಷದಿಂದ ಸಂಭವ್ಯ ಅಭ್ಯರ್ಥಿ ಎಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿ ಅವರು ಘೋಷಣೆ ಮಾಡಿದ್ದಾರೆ.

ನಾಡಿನ ಅಭಿವೃದ್ಧಿಗಾಗಿ ನಾವೆಲ್ಲರೂ ರಾಜ್ಯದಂತ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ ಹಾಗೂ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಮತದಾರ ಬಂಧುಗಳು
ನಮ್ಮ ಕೆ.ಆರ್.ಎಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.

ಹರಪನಹಳ್ಳಿಯ ಮತದಾರ ಬಂದುಗಳು ನಿಮ್ಮ ಮತ ಎಂಬ ಅಸ್ತ್ರದಿಂದ ವ್ಯವಸ್ಥೆ ಬದಲು ಮಾಡಲು ಸಾಧ್ಯ ಆಗ ಮಾತ್ರ ರಾಜಕೀಯ ಸುಧೀಕರಣ ಸಾಧ್ಯ ರಾಜಕೀಯ ಸುಧೀಕರಣದಿಂದ ಇಡೀ ವ್ಯವಸ್ಥೆಯ ಬದಲು ಮಾಡಲು ಸಾಧ್ಯ ಗಾಂಧೀಜಿ ಕಂಡ ರಾಮರಾಜ್ಯ ನಿರ್ಮಿಸಲು ಸಾಧ್ಯ ಅದಕ್ಕೆಲ್ಲ ನಿಮ್ಮೆಲ್ಲರ ಪ್ರತ್ಯಕ್ಷ ಪರೋಕ್ಷ ಬೆಂಬಲ ನಮ್ಮ ಪಕ್ಷಕ್ಕೆ ಬೇಕೆಂದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಸುಂಕಪ್ಪ, ಸಿದ್ದಣ್ಣ, ವೀರಭದ್ರಪ್ಪ, ನಿಂಗಪ್ಪ, ಕೊಟ್ರೇಶ್, ಸಣ್ಯನಾಯ್ಕ ಇತರರಿದ್ದರು