ಡೈಲಿ ವಾರ್ತೆ:16 ಮಾರ್ಚ್ 2023
ಕುಂದಾಪುರ ಖಾರ್ವಿ ಮೇಲ್ಕೇರಿ ಸರಕಾರಿ ಬಾವಿಕಟ್ಟೆಯ ಚರಂಡಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ: ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಮನವಿ
ಕುಂದಾಪುರ: ಕುಂದಾಪುರ ಪುರಸಭೆಯ 2ನೇ ವಾರ್ಡ್ ವ್ಯಾಪ್ತಿಯ ಖಾರ್ವಿ ಮೇಲ್ಕೆರಿ ಸರಕಾರಿ ಬಾವಿಕಟ್ಟೆ ಸ್ಥಳದಲ್ಲಿ ಚರಂಡಿ ಹಾಗೂ ರಸ್ತೆಯ ಸಮೀಪವಾಗಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಈ ಸರಕಾರಿ ಬಾವಿಕಟ್ಟೆ ಸ್ಥಳ ಸಾರ್ವಜನಿಕ ಸ್ಥಳವಾಗಿದ್ದು, ಮಹಿಳೆಯರು ಬಟ್ಟೆ ಒಗೆಯುವ ಸ್ಥಳವಾಗಿದೆ. ಈ ಸರಕಾರಿ ಜಾಗದಲ್ಲಿ ಒಂದು ಅಕ್ರಮ ಕಟ್ಟಡ ನಿರ್ಮಾಣವಾಗಿದೆ.
ಈ ಅಕ್ರಮ ಕಟ್ಟಡದಿಂದಾಗಿ ಗ್ರಾಮದ ಜನರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಮಹಿಳೆಯರಿಗೆ ಬಾವಿಯ ನೀರು ತರಲು ಹಾಗೂ ಬಟ್ಟೆ ಒಗೆಯಲು ಹಾಗೂ ಜನ ಓಡಾಡಲು ಸ್ಥಳವಿಲ್ಲದೆ ಅಡಚಣೆ ಆಗಿದ್ದು, ಕೂಡಲೇ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಆ ಅಕ್ರಮ ಕಟ್ಟಡವನ್ನು ತೆರವು ಗೊಳಿಸಿ
ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರಿಗೆ ಬಟ್ಟೆ ಒಗೆಯಲು ಕಟ್ಟೆ ಮಾಡಿ ಮತ್ತು ಜನ ತಿರುಗಾಡಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರಾದ ಸತೀಶ್ ಖಾರ್ವಿ ಗ್ರಾಮಸ್ಥರ ಪರವಾಗಿ ಮಾನ್ಯ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಲ್ಲಿ ಮನವಿ ಮಾಡಿದ್ದಾರೆ.