



ಡೈಲಿ ವಾರ್ತೆ:16 ಮಾರ್ಚ್ 2023


ಮಂಗಳೂರು: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ- ಮಟ್ಕಾ ಜುಗಾರಿ ಆಡುತ್ತಿದ್ದ ಮೂವರ ಬಂಧನ
ಮಂಗಳೂರು : ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಬಂಧಿತರನ್ನು ಪ್ರವೀಣ್ (33), ಮನೋಜ್ (43), ರಾಕೇಶ್ (47) ಎಂದು ಗುರುತಿಸಲಾಗಿದೆ.
ಇನ್ನು ನಗರದ ಜ್ಯೋತಿ ಜಂಕ್ಷನ್ ಬಳಿ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ಈ ವೇಳೆ 3000 ನಗದು, ಎರಡು ಮೊಬೈಲ್, ಎರಡು ಕಂಪ್ಯೂಟರ್ ಸೇರಿದಂತೆ 75 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.