ಡೈಲಿ ವಾರ್ತೆ:19 ಮಾರ್ಚ್ 2023

ವರದಿ: ವಿದ್ಯಾಧರ ಮೊರಬ

ಅಂಕೋಲಾ: ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ: ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ – ಸಚಿವ ಮುರುಗೇಶ ನಿರಾಣಿ

ಅಂಕೋಲಾ : ಚುನಾವಣೆ ಸಮೀಪಿಸಿದ್ದರಿಂದಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಈಗ ವಿವಿಧ ಭರವಸೆಯನ್ನು ಮತದಾರರಿಗೆ ನೀಡುತ್ತಿದೆ. ಅದು ಸಾಲದು ಎಂಬಂತೆ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡುತ್ತಿ ದ್ದಾರೆ. ಇದರಿಂದ ಅವರಿಗೆ ಅವರ ಮೇಲೆ ನಂಬಿಕೆ ಇಲ್ಲ ಎನ್ನುವುದು ಸಾಬೀತಾಗಿದ್ದು, ಮುಂದಿನ ಭಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಬಿಜೆಪಿಯಿಂದ ನಡೆದ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ 150 ಕ್ಕಿಂತ ಅಧಿಕ ಸ್ಥಾನ
ಪಡೆಯುವುದರೊಂದಿಗೆ ಬಿಜೆಪಿ ಇನ್ನು ಬಲಿಷ್ಠವಾ ಗಲಿದೆ. ಮಹಿಳೆ ಶಾಸಕಿಯಾಗಿ ತನ್ನ ಕ್ಷೇತ್ರದ ಬಗ್ಗೆ ಅತಿಯಾದ ಪ್ರೀತಿಯನ್ನು ಹೊಂದಿದ ರೂಪಾಲಿ ನಾಯ್ಕ ಸಾಕಷ್ಟು ಅನುದಾನವನ್ನು ತರುವದರ ಜತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಈ ಬಾರಿಯು ಕೂಡ ರೂಪಾಲಿ ನಾಯ್ಕ ಅತ್ಯಂತ ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರೂಪಾಲಿ ನಾಯ್ಕ ಶಾಸಕಿಯಾದ ನಂತರ ಸೀರ್ಬಡ್ ನಿರಾಶ್ರಿತರಿಗೆ ಪರಿಹಾರ, ದೇವಸ್ಥಾನ ಅಭಿವೃದ್ಧಿಗೆ ಹಣ ಮಂಜೂರಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ
ಕಾರ್ಯಗಳನ್ನು ಮಾಡಿದ್ದಾರೆ. ಕಾರವಾರದ ಮೂಡಗೇರಿಯಲ್ಲಿ
ಕೈಗಾರಿಕಾ ವಲಯ ಮಾಡಲು ಈ ಹಿಂದೆ 1 ಎಕರಿಗೆ 10 ಲಕ್ಷ ರೂ. ಪರಿಹಾರ ನೀಡಿದ್ದರು, ಆದರೆ ಶಾಸಕಿ ರೂಪಾಲಿ ನಾಯ್ಕ ಮುರುಗೇಶ ನಿರಾಣಿ ಅವರನ್ನು ಸ್ಥಳಕ್ಕೆ ಕರೆಯಿಸಿ 1 ಎಕರಿಗೆ 50 ಲಕ್ಷದಂತೆ ಅಂದರೆ 1 ಎಕರೆಗೆ 40 ಲಕ್ಷದಂತೆ ಹೆಚ್ಚುವರಿ ಪರಿಹಾರ ನೀಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಪ್ರಥಮ ಬಾರಿಗೆ ಚುನಾವಣೆಗೆ ನಿಂತ ಸಂದರ್ಭದಲ್ಲಿ ನನ್ನ ಕ್ಷೇತ್ರ ದ ಜನರು ನನ್ನನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಅದರಂತೆ ನಿಮ್ಮ ಮಾತನ್ನು ನಾನು ಉಳಿಸಿಕೊಂಡಿದ್ದು, ಮುಂದೆಯು ಕೂಡ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,
ಪ್ರಮುಖರಾದ ರಾಜೇಂದ್ರ ನಾಯ್ಕ, ಸಂಜಯ ನಾಯ್ಕ ಭಾವಿಕೇರಿ, ಹೂವಾ ಖಂಡೇಕರ್, ಭಾಸ್ಕರ ನಾರ್ವೇಕರ್, ಜಗದೀಶ ನಾಯಕ ಮೊಗಟಾ, ಬಿಂದೇಶ ನಾಯಕ, ಸುಬ್ರಹ್ಮಣ್ಯ ಗಾಂವಕರ, ತಾರಾ ಗಾಂವಕರ, ಶಾಂತಲಾ ನಾಡಕರ್ಣಿ, ರೇಖಾ ಗಾಂವಕರ, ನಾಗೇಶ ಕಿಣಿ, ಜಯಾ ಬಿ.ನಾಯ್ಕ, ರಾಜೇಶ್ವರಿ ಕೇಣಿಕರ್, ಶಾಂತಾ ಹರಿಕಂತ್ರ ಸೇರಿ ದಂತೆ ಸಾವಿರಾರು ಜನರು ಸೇರಿದ್ದರು. ಪಟ್ಟಣದ ಕಣಕಣೇಶ್ವರ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿಯಲ್ಲಿ ಕಾರವಾರದಿಂದ 30 ಟೆಂಪೋ, 2 ಬಸ್ ಜನರು ಪಾಲ್ಗೊಂಡಿದ್ದು, ಪಟ್ಟಣದ ವಿವಿಧ
ರಸ್ತೆ ಗಳಲ್ಲಿ ಸಂಚರಿಸುವ ಮೂಲಕ ಗಮನ ಸೆಳೆಯಿತು