ಡೈಲಿ ವಾರ್ತೆ:19 ಮಾರ್ಚ್ 2023
ಫರಂಗಿಪೇಟೆ : ಪುದು ಗ್ರಾಮ ಪಂಚಾಯತ್ ಚುನಾಯಿತ ನೂತನ ಸದಸ್ಯರಿಗೆ ಸನ್ಮಾನ, ಮತದಾರ ಬಾಂಧವರಿಗೆ ಅಭಿನಂದನೆ ಹಾಗೂ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ
ಬಂಟ್ವಾಳ ; ಕರ್ನಾಟಕದ ಸಮಸ್ತ ಜನತೆಯ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದ ವೇಳೆ ಜಾರಿಗೆ ತಂದ ಹರೀಶ್ ಸಾಂತ್ವನ ಯೋಜನೆಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರಕ್ಕೆ ಜನತೆಯ ಶಾಪ ತಟ್ಟದೇ ಇರಲಾರದು ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಫರಂಗಿಪೇಟೆ ಜಂಕ್ಷನ್ ನಲ್ಲಿ ಭಾನುವಾರ ನಡೆದ ಪುದು ಗ್ರಾಮ ಪಂಚಾಯತ್ ಚುನಾಯಿತ ನೂತನ ಸದಸ್ಯರಿಗೆ ಸನ್ಮಾನ, ಮತದಾರ ಬಾಂಧವರಿಗೆ ಅಭಿನಂದನೆ ಹಾಗೂ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ಶಾಸಕ ಯು.ಟಿ ಖಾದರ್ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ಸರ್ವರ ಪ್ರೀತಿ ವಿಶ್ವಾಸದ ಮೂಲಕ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದ
ಅವರು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಮುಂದಾಗಿರುವ ಎಸ್ಡಿಪಿಐ ಪಕ್ಷದ ಒಳ ಮೈತ್ರಿಯ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಕವಿ ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ ಮಾತನಾಡಿದರು
ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಾಂಗ್ರೆಸ್ ಕಾರ್ಮಿಕ ಜಿಲ್ಲಾದ್ಯಕ್ಷ ಲಾರೆನ್ಸ್, ಪ್ರಮುಖರಾದ ಸುಹೈಲ್ ಖಂದಕ್, ದುರ್ಗಾ ಚರಣ್, ಇಸ್ಮಾಯಿಲ್,ಕೆ.ಇ.ಎಲ್, ಅಬೂಬಕ್ಕರ್ ಕುಂಜತ್ತಬೈಲ್, ಲತೀಫ್ ಅರಫಾ, ಇಮ್ತಿಯಾಜ್, ಜಗದೀಶ್, ವೃಂದಾ ಪೂಜಾರಿ, ನಿಸಾರ್, ಎಫ್.ಎ.ಅಬ್ದುಲ್ ಖಾದರ್, ಸಮೀರ್ ಪಜೀರ್, ಮುಸ್ತಫಾ ಹರೇಕಳ, ಸಿದ್ದೀಕ್ ಅಮ್ಮೆಮಾರ್, ಬಶೀರ್, ಹೈದರ್, ಮಜೀದ್ ಫರಂಗಿಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶುರು ಗ್ರಾ.ಪಂ. ನ ಚುನಾಯಿತ 21 ಸದಸ್ಯರುಗಳಾದ ರಮ್ಲಾನ್ ಮಾರಿಪಲ್ಲ, ಇಕ್ಬಾಲ್ ಸುಜೀರು, ವಿಶು ಕುಮಾರ್, ಮುಹಮ್ಮದ್ ಮೋನು, ಇಶಾಂ ಫರಂಗಿಪೇಟೆ, ರಿಯಾಝ್ ಕುಂಪನಮಜಲು, ಹುಸೈನ್ ಪಾಡಿ, ಹಾಸಿರ್ ಪೆರಿಮಾರ್ , ರಝಾಕ್ ಅಮ್ಮೆಮಾರ್, ಮುಹಮ್ಮದ್ ಅನಸ್, ಲಿಡಿಯೋ ಪಿಂಟೋ, ರಶೀದಾ, ರಹೀನ, ಮುಮ್ತಾಜ್, ಜೀನತ್, ರಝಿಯಾ, ಜಯಂತಿ, ನೆಬಿಸ, ರುಕ್ಸಾನಾ, ಸಾರಮ್ಮ, ಆತಿಕಾ ಇವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸಿಫ್ ಇಕ್ಬಾಲ್ ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಪ್ರಸ್ತಾವನೆ ಗೈದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.