



ಡೈಲಿ ವಾರ್ತೆ:21 ಮಾರ್ಚ್ 2023


ಉಡುಪಿ: ಕುರ್ಕಾಲು ಯುವತಿ ನಾಪತ್ತೆ, ಪ್ರಕರಣ ದಾಖಲು!
ಶಿರ್ವ: ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯ ಕುರ್ಕಾಲು ಗ್ರಾಮದ ಶಂಕರಪುರ ಬಿಳಿಯಾರು ನಿವಾಸಿ ವಾಣಿ (25) ತಾಯಿ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅವರಲ್ಲಿ ಹೇಳದೆ ಮಾ. 20ರಂದು ಮನೆಯಿಂದ ಹೊರಗೆ ಹೋದವಳು ವಾಪಾಸು ಮನೆಗೆ ಬರದೆ ಕಾಣೆಯಾಗಿದ್ದಾಳೆ.
ಸಹೋದರಿ ಆಶಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.