



ಡೈಲಿ ವಾರ್ತೆ:24 ಮಾರ್ಚ್ 2023


ಉಡುಪಿ:ಮಧ್ಯರಾತ್ರಿ ಕರ್ಕಶ ಡಿ.ಜೆ. ಸೌಂಡ್ ಬಳಕೆ – ಪೊಲೀಸರಿಂದ ದಾಳಿ ಸೊತ್ತುಗಳ ವಶ, ಪ್ರಕರಣ ದಾಖಲು!
ಉಡುಪಿ: ನಗರದ ಪುತ್ತೂರು ಗ್ರಾಮದ ಕೊಡಂಕೂರು ಎಂಬಲ್ಲಿ ಮಧ್ಯ ರಾತ್ರಿಯ ಕರ್ಕಶವಾದ ಡಿ.ಜೆ. ಸೌಂಡ್ ಹಾಕಿ ನೃತ್ಯ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿದ ನಗರ ಪೊಲೀಸರು, ಸೊತ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಡಂಕೂರು ಪುತ್ರನ್ ಗ್ಯಾಸ್ ಗೋಡಾನ್ ಬಳಿ ರವಿರಾಜ್(50) ಎಂಬವರ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ. ಸೌಂಡ್ಸ್ ಹಾಕಿಕೊಂಡು ನೃತ್ಯ ಮಾಡುತ್ತಿದ್ದು, ಈ ಕುರಿತ ಮಾಹಿತಿಯಂತೆ ದಾಳಿ ನಡೆಸಿದ ಉಡುಪಿ ನಗರ ಪೊಲೀಸರು, ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.