



ಡೈಲಿ ವಾರ್ತೆ:27 ಮಾರ್ಚ್ 2023


ದಕ್ಷಿಣ ಕನ್ನಡದ ಯುವಕ ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಿಂದ ಮೃತ್ಯು!

ಮಂಗಳೂರು, ಮಾ.27: ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ ಸುಲೈಮಾನ್ (35) ಎಂಬವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸುಲೈಮಾನ್ ರಸ್ತೆ ದಾಟುತ್ತಿದ್ದ ವೇಳೆ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮಲ್ಲೂರು ಪಲ್ಲಿಬೆಟ್ಟು ಅಬೂಬಕರ್ ಎಂಬವರ ಪುತ್ರ ಸುಲೈಮಾನ್ ಅವರು ಜುಬೈಲ್‌ನ ಲುಮಿನಾಸ್ ಕಂಪೆನಿಯ ಉದ್ಯೋಗಿಯಾಗಿದ್ದರು.
ಇಬ್ಬರು ಮಕ್ಕಳ ತಂದೆಯಾಗಿರುವ ಸುಲೈಮಾನ್ ಎಪ್ರಿಲ್ 20ರಂದು ಊರಿಗೆ ವಾಪಸಾಗುವ ಯೋಜನೆ ಹಾಕಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.