ಡೈಲಿ ವಾರ್ತೆ:27 ಮಾರ್ಚ್ 2023

ಬಂಟ್ವಾಳ; ಬೈಕ್ ಗಳೆರಡು ಮುಖಾಮುಖಿ ಢಿಕ್ಕಿ, ಯುವಕ ಮೃತ್ಯು

ಬಂಟ್ವಾಳ; ಕಕ್ಯಪದವಿನಲ್ಲಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಅಬೂಬಕ್ಕರ್ ಬಂಗೇರಕಟ್ಟೆ ಇವರ ಮಗ ಫಯಾಝ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ.
ಇಂದು ಸಂಜೆ ಕಕ್ಯಪದವು LCR ಸ್ಕೂಲ್ ಬಳಿ ಬೈಕ್ ಅಪಘಾತ ಗೊಂಡಿತ್ತು, ತಕ್ಷಣ ಊರಿನ ಯುವಕರು ಆಗಮಿಸಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಯುವಕನನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.