ಕೋಟ| ಮೀನುಗಾರಿಕೆ ವೇಳೆ ದುರಂತ: ಬೋಟಿನಿಂದ ಆಯತಪ್ಪಿ ನೀರಿಗೆ ಬಿದ್ದು ಯುವ ಮೀನುಗಾರ ಸಾವು

ಕೋಟ: ಬ್ರಹ್ಮಾವರ ತಾಲೂಕು ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿ ಈಶ್ವರಿ ಬೋಟಿನಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಮಣೂರು ಗ್ರಾಮದ ನಟರಾಜ್ (36) ಅವರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಫೆಬ್ರವರಿ 3ರಂದು ರಾತ್ರಿ ಸಂಭವಿಸಿದೆ.

ಊಟದ ಬಳಿಕ ಕೈ ತೊಳೆಯುವ ವೇಳೆ ಆಯತಪ್ಪಿ ಬಿದ್ದ ನಟರಾಜ್ ಅವರನ್ನು ಸಹಕಾರ್ಮಿಕರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಫೆಬ್ರವರಿ 4ರಂದು ಬೆಳಿಗ್ಗೆ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 07/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.