ಡೈಲಿ ವಾರ್ತೆ:30 ಮಾರ್ಚ್ 2023
ಕಾರ್ಕಳ: ಬಂಗ್ಲೆಗುಡ್ಡೆಯಲ್ಲಿ ಆ್ಯಂಬುಲೆನ್ಸ್ ಪಲ್ಟಿ – ನಾಲ್ವರು ಸಣ್ಣಪುಟ್ಟ ಗಾಯದೊಂದಿಗೆ ಪಾರು
ಕಾರ್ಕಳ : ನಗರದ ಬಂಗ್ಲೆಗುಡ್ಡೆಯಲ್ಲಿ ಆ್ಯಂಬುಲೆನ್ಸ್ ಪಲ್ಟಿಯಾದ ಘಟನೆ ಮಾ. 30ರ ಸಂಜೆ ನಡೆದಿದ್ದು, ಪರಿಣಾಮ ಅದರಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಕಾರ್ಕಳ ರೋಟರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಕಾರ್ಕಳದಿಂದ ಎಳ್ಳಾರೆ ಸಾಗುತ್ತಿದ್ದ ವೇಳೆ ಬಂಗ್ಲೆಗುಡ್ಡೆಯಲ್ಲಿ ಬೈಕ್ ಒಂದು ಅಡ್ಡ ಬಂದ ಪರಿಣಾಮ ಆ್ಯಂಬುಲೆನ್ಸ್ ಚಾಲಕ ಅದನ್ನು ತಪ್ಪಿಸಲು ಯತ್ನಿಸಿದ್ದರು. ಈ ಸಂದರ್ಭ ಆ್ಯಂಬುಲೆನ್ಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಎಳ್ಳಾರೆ ಭಾಗದ ನಾಲ್ವರು ರೋಟರಿ ಆಸ್ಪತ್ರೆಯಲ್ಲಿ ಕಣ್ಣಿನ ಶಿಬಿರದಲ್ಲಿ ಸರ್ಜರಿ ಮಾಡಿಸಿಕೊಂಡು ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಚಾಲಕ ಯಾವುದೇ ರೀತಿಯ ಗಾಯವಾಗದೇ ಪಾರಾಗಿದ್ದಾರೆ. ಗಾಯಗೊಂಡವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆಯೊಯ್ಯಲಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.