ಡೈಲಿ ವಾರ್ತೆ:31 ಮಾರ್ಚ್ 2023
ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ ಯುವಕನೋರ್ವ ಆತ್ಮಹತ್ಯೆ
ಕಡಬ:ಯುವಕನೋರ್ವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ನಡೆದಿದೆ.
ರೆನೀಶ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ರೆನೀಶ್ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದ.ಇಂದು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಬ್ಬಂಟಿಯಾಗಿ ವಾಸಿಸುತ್ತಿದ್ದ ರೆನೀಶ್ ಮಾನಸಿಕವಾಗಿಯೂ ನೊಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ. ನನಗೆ ಭೂಮಿ ಜೀವನ ಸಾಕಾಗಿದೆ. ಆಂಟಿ ಮತ್ತು ಮಾಮ ನನಗೆ ನೀವು ಕ್ಷಮಿಸಬೇಕು. ನಾನು ಮಾಡುವ ದೊಡ್ಡ ತಪ್ಪು ಎಂದು ಬರೆಯಲಾಗಿದೆ.