ಡೈಲಿ ವಾರ್ತೆ:01 ಏಪ್ರಿಲ್ 2023

ಕೋಟ:ಪಡುಕರೆ ಬೀಚ್‌ನಲ್ಲಿ ಅಕ್ರಮ ಮದ್ಯ ಸೇವನೆ, ಮದ್ಯ ಕಾರು ವಶಕ್ಕೆ

ಕೋಟ: ಕೋಟತಟ್ಟು  ಗ್ರಾಮದ ಪಡುಕೆರೆ ಸಮುದ್ರ ತೀರದಲ್ಲಿ  ವಿಕಾಸ್‌(18) ಎನ್ನುವ ಯುವಕ ಸಾರ್ವಜನಿಕ  ಸ್ಥಳದಲ್ಲಿ  ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿರುವವನ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟ ಪೊಲೀಸದರು ಅವನನ್ನು ವಶಕ್ಕೆ ಪಡೆದುಕೊಂಡು, ಆತನಿಂದ 140 ರೂ. ಮೌಲ್ಯದ ಮದ್ಯ ಮತ್ತು 5ಲಕ್ಷ  ಮೌಲ್ಯದ ರಿಟ್ಜ್‌ ಕಾರನ್ನು ಸ್ವಾಧೀನ ಪಡೆಸಿಕೊಂಡಿದ್ದಾರೆ.