ಡೈಲಿ ವಾರ್ತೆ:01 ಏಪ್ರಿಲ್ 2023

ಕೋಟ: ಪಡುಕರೆ ಬೀಚ್‌ನಲ್ಲಿ ಅಕ್ರಮ ಮದ್ಯ ಸೇವನೆ, ಮದ್ಯ,ಕಾರು ವಶಕ್ಕೆ

ಕೋಟ:ಕೋಟತಟ್ಟು ಗ್ರಾಮದ ಪಡುಕೆರೆ ಸಮುದ್ರ ತೀರದಲ್ಲಿ ವಿಕಾಸ್‌(18) ಎನ್ನುವ ಯುವಕ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿರುವವನ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಟ ಪೊಲೀಸರು  ಅವನನ್ನು ವಶಕ್ಕೆ ಪಡೆದುಕೊಂಡು, ಆತನಿಂದ 140 ರೂ. ಮೌಲ್ಯದ ಮದ್ಯ ಮತ್ತು 5 ಲಕ್ಷ ಮೌಲ್ಯದ ರಿಟ್ಜ್‌ ಕಾರನ್ನು ಸ್ವಾಧೀನ ಪಡೆಸಿಕೊಂಡಿದ್ದಾರೆ.