



ಡೈಲಿ ವಾರ್ತೆ:03 ಏಪ್ರಿಲ್ 2023




ಕನಕಪುರ: ಅಗ್ನಿಕೊಂಡ ನೆರವೇರುವ ಮುನ್ನವೇ ಕುಸಿದು ಬಿದ್ದು ಅರ್ಚಕ ಮೃತ್ಯು; ವಿಡಿಯೋ ವೀಕ್ಷಿಸಿ
ರಾಮನಗರ: ಅಗ್ನಿಕೊಂಡ ನೆರವೇರುವ ಮುನ್ನವೇ ಅರ್ಚಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ಕನಕಪುರ ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ನಡೆದಿದೆ. ನಾಗರಾಜು (55) ಎಂಬುವರು ಸಾವನ್ನಪ್ಪಿದ ಅರ್ಚಕ.

ಅರ್ಚಕರು ಮಾವತ್ತೂರಮ್ಮ ದೇವಿಯ ಅಗ್ನಿಕೊಂಡೋತ್ಸವದ ಅಂಗವಾಗಿ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಮೆರವಣಿಗೆ ಸಂದರ್ಭದಲ್ಲಿ ಮಹಿಳೆ ಒಬ್ಬರು ಮೈಮೇಲೆ ದೇವರು ಬಂದ ಹಾಗೆ ಕುಣಿಯಲು ಆರಂಭಿಸಿದರು. ಆಗ ಅರ್ಚಕ ನಾಗರಾಜು ಆ ಮಹಿಳೆಗೆ ಭತ್ತದಿಂದ ಹೊಡೆದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅರ್ಚಕ ನಾಗರಾಜು ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

