ಡೈಲಿ ವಾರ್ತೆ:04 ಏಪ್ರಿಲ್ 2023

✒️ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ ಗ್ರಾಮಾಂತರ ಪೊಲೀಸರ ಮಿಂಚಿನ ಯಶಸ್ವಿ ಕಾರ್ಯಾಚರಣೆ: ಬೋರ್ ವೆಲ್ ಪೈಪ್ ಕಳ್ಳರ ಸೆರೆ – ಪೈಪ್ ಸಹಿತ ಕೃತ್ಯಕ್ಕೆ ಬಳಸಿದ ಟಿಪ್ಪರ್ ವಶಕ್ಕೆ

ಸಾಗರ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮುಂಬಾಳು ಗ್ರಾಮದ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವರು ತಮ್ಮ ಮನೆಯಲ್ಲಿ ಬೋರ್‌ವೆಲ್ ಕಂಟ್ರಾಕ್ಟರ್ ಆದ ಲೋಕನಾಥ ತಂದೆ ರಾಜೇಗೌಂಡರ್ ಪಕ್ಕದ ಖಾಲಿ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಬೋರ್‌ವೆಲ್ ಗೆ ಅಳವಡಿಸುವ ಕೇಸಿಂಗ್ ಪೈಪ್‌ಗಳನ್ನು ಯಾರೋ ಕಳ್ಳರು ದಿನಾಂಕ:-17-02-2023 ರಂದು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ

66 ಸದರಿ ಪ್ರಕರಣದ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಶ್ರೀಯುತ ಮಿಥುನ್ ಕುಮಾರ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀಯುತ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ ಶ್ರೀಯುತ ರೋಹನ್‌ ಜಗದೀಶ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪವಿಭಾಗರವರ ಸಾರಥ್ಯದಲ್ಲಿ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪ್ರವೀಣ್ ಕುಮಾರ್, ಹಾಗೂ ಪಿಎಸ್‌ಐ ಶ್ರೀ ನಾರಾಯಣ ಮಧುಗಿರಿ, ಕಾರ್ಗಲ್ ಪೊಲೀಸ್ ಠಾಣಾ ಪಿಎಸ್‌ಐ ಶ್ರೀ ತಿರುಮಲೇಶ್ ಪಿಎಸ್‌ಐ ಶ್ರೀ ಎಸ್.ಪಿ ಹೊಸಮನಿ ಹಾಗೂ ಪೊಲೀಸ್ ಸಿಬ್ಬಂಧಿಗಳಾದ ಸಿಹೆಚ್‌ಸಿ, ಸನಾವುಲ್ಲಾ, ಸಿಹೆಚ್ ಸಿ 299 ಷೇಖ್ ಪೈರೋಜ್ ಅಹಮದ್ ಸಿಪಿಸಿ 1361 ಶ್ರೀ ರವಿಕುಮಾರ್, ಸಿಪಿಸಿ II01 ಹನುಮಂತ ಜ೦ಬೂರ್ ರವರು ಈ ಪ್ರಕರಣದ 1 ನೇ ಆರೋಪಿ ಚಿರಂಜೀವಿ @ ಚಿರು @ ಚಿನ್ನ ತಂದೆ ದೇವರಾಜ, 35 ವರ್ಷ, ಲಿಂಗಾಯತರ ಜಾತಿ ಕೃಷಿ ಮತ್ತು ಬೋರ್ ವೆಲ್ ಏಜೆನ್ಸಿ ಕೆಲಸ ವಾಸ ಹಾಲುಗುಡ್ಡೆ ಗ್ರಾಮ ಹೊಸನಗರ ತಾಲ್ಲೂಕ್ ಈತನು 2 ನೇ ಆರೋಪಿ ಪ್ರವೀಣ @ ಪಾಂಡು ತಂದೆ ಇಂದ್ರೇಶ, 25 ವರ್ಷ, ಆದಿ ಕರ್ನಾಟಕ ಜಾತಿ, ಡ್ರೈವರ್ ಕೆಲಸ ವಾಸ ಗೇರು ಬೀಸು ಗ್ರಾಮ ಸಾಗರ ತಾಲ್ಲೂಕ್ ಈತನೊಂದಿಗೆ ಕೃತ್ಯವೆಸಗಿದ್ದು, 1 ನೇ ಆರೋಪಿಯನ್ನು ದಿನಾಂಕ:-03-04-2023 ರಂದು ಮದ್ಯಾಹ್ನ 2.45 ಗಂಟೆಗೆ ಸಾಗರ ತಾಲ್ಲೂಕ್ ಬಳಸಗೋಡು ಗ್ರಾಮದ ಹತ್ತಿರ ಮಾಲಿನೊಂದಿಗೆ ವಶಕ್ಕೆ ಪಡೆದುಕೊಂಡು ದಸ್ತಗಿರಿ ಆರೋಪಿಯಿಂದ 2.00.000/- ರೂ ಬೆಲೆಯ ಬೋರ್‌ವೆಲ್ ಕೇಸಿಂಗ್ ಪೈಪ್‌ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 10.00.000./- ರೂ ಬೆಲೆಯ ಒಂದು ಕೆಎ-70-3037 ನೇ ಟಿಪ್ಪರ್ ಲಾರಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ 2 ನೇ ಆರೋಪಿ ತಲೆ ಮರೆಸಿಕೊಂಡಿದ್ದು ಈತನನ್ನು ಪತ್ತೆ ಮಾಡಬೇಕಾಗಿರುತ್ತದೆ ಈ ಬಗ್ಗೆ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ.