ಡೈಲಿ ವಾರ್ತೆ:05 ಏಪ್ರಿಲ್ 2023
ಅಕ್ರಮ ಚಿನ್ನ ಸಾಗಾಟ – 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ!
ಬೆಳಗಾವಿ: ಹಳಿಯಾಳದಿಂದ ಕಕ್ಕೇರಿಗೆ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 40 ಲಕ್ಷ ರೂ ಮೌಲ್ಯದ ಚೆನ್ನಾಭರಣವನ್ನು ಖಾನಾಪುರ ತಾಲೂಕಿನ ನಂದಗಡ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೆಳಗಾವಿಯ ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು ಪೊಲೀಸರು ಕಾರು ತಪಾಸಣೆ ಮಾಡುವಾಗ 21.25 ಲಕ್ಷ ರೂ.ಮೌಲ್ಯದ 395 ಗ್ರಾಂ ಚಿನ್ಮಾಭರಣ ಹಾಗೂ 19 ಲಕ್ಷ ರೂ.ಮೌಲ್ಯದ 28 ಕೆ.ಜಿ. ಬೆಳ್ಳಿಯ ಆಭರಣಗಳು ಸಿಕ್ಕಿರುತ್ತದೆ. ಈ ಚಿನ್ನಾಭರಣಗಳಿಗೆ ಯಾವುದೇ ದಾಖಲೆಗಳು ಇರಲಿಲ್ಲ ಎಂದು ತಿಳಿದು ಬಂದಿದೆ.
ಪೊಲೀಸರು ಚಿನ್ನಾಭರಣ ಹಾಗೂ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.