ಡೈಲಿ ವಾರ್ತೆ:06 ಏಪ್ರಿಲ್ 2023
ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ: ಧಗ ಧಗನೇ ಹೊತ್ತಿ ಉರಿದ ಕಾರು
ಕುಷ್ಟಗಿ: ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಧಗ ಧಗನೇ ಹೊತ್ತಿ ಉರಿದ ಘಟನೆ ಕುಷ್ಟಗಿಯಲ್ಲಿ ಸಂಭವಿಸಿದೆ.
ಕಾರು ವಿಜಯಪುರದಿಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಬೆಂಗಳೂರಿಗೆ ಕುಷ್ಟಗಿ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಕುಷ್ಟಗಿ ಹೊರವಲಯದಲ್ಲಿ ಈ ಘಟನೆ ಸಂಭವಿದೆ.
ಕಾರಿನ ಇಂಜಿನ್ ತಾಂತ್ರಿಕ ದೋಷವೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಹೊರಗೆ ಬಂದಿದ್ದು ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಕಾರು ಧಗ ಧಗನೇ ಬೆಂಕಿ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಒಂದೂವರೆ ಲಕ್ಷ ರೂ. ದಾಖಲಾತಿಗಳು ಸುಟ್ಟು ಕರಕಲಾಗಿದೆ.
ಈ ಕಾರು ಕೋಲಾರ ಜಿಲ್ಲೆಯ ವೇಮಗಲ್ ಗ್ರಾಮದ ಲಕ್ಕಿಂಟಿವಾರಿ ರಾಮ್ ರಡ್ಡಿ, ನಾರಾಯಣ ರಡ್ಡಿ ಅವರಿಗೆ ಸೇರಿದ ಕಾರು ಇದಾಗಿದೆ. ಮೂರು ತಿಂಗಳ ಹಿಂದೆ ಪರಿಚಯಿಸ್ಥರಾದ ಅನಿಲಕುಮಾರ ಅವರಿಂದ ಈ ಕಾರು ಖರೀಧಿಸಿದ್ದರು. ಕಾರಿಗೆ ಸಂಭಂದಿಸಿದ ಆರ್ ಸಿ. ಯನ್ನು ಯಲಹಂಕ ಆರ್ ಟಿಓ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಲಕ್ಕಿಂಟಿವಾರಿ ರಾಮರಡ್ಡಿ ತಿಳಿಸಿದ್ದಾರೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.