ಡೈಲಿ ವಾರ್ತೆ:10 ಏಪ್ರಿಲ್ 2023

ನೇರಳಕಟ್ಟೆ : ಎಪ್ರಿಲ್ 15 ರಿಂದ 29 ರ ತನಕ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರ

ಬಂಟ್ವಾಳ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕೃತಿಕ ಸಂಘ ನೇರಳಕಟ್ಟೆ, ಯಂಗ್ ಚಾಲಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನೇರಳಕಟ್ಟೆ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ನೇರಳಕಟ್ಟೆ, ನೇತಾಜಿ ಗೆಳೆಯರ ಬಳಗ ನೇತಾಜಿ ನಗರ ಹಾಗೂ ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರವು ಎಪ್ರಿಲ್ 15 ರಿಂದ 29 ರ ತನಕ ಪ್ರತಿದಿನ ಬೆಳಗ್ಗೆ 9.30 ರಿಂದ 4.30 ರ ವರೆಗೆ ನೇರಳಕಟ್ಟೆ ಶ್ರೀ ಗಣೇಶ ಸಭಾಭವನದಲ್ಲಿ ನಡೆಯಲಿದೆ.

ನೇರಳಕಟ್ಟೆ ಶ್ರದ್ದಾ ಕೇಂದ್ರದ ಡಿ ಕೆ ಸ್ವಾಮಿ ಶಿಬಿರವನ್ನು ಉದ್ಘಾಟಿಸಲಿದ್ದು, ನೇರಳಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬೇಬಿ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಅನುಷಾ, ನೇರಳಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ರಾಮಚಂದ್ರ ಮಾಸ್ಟರ್ , ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ. ತನಿಯಪ್ಪ ಗೌಡ, ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.