


ಡೈಲಿ ವಾರ್ತೆ:10 ಏಪ್ರಿಲ್ 2023


ಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಪರ್ಕಳ: ಪರ್ಕಳ ರಾ.ಹೆ. ಬಳಿ ಕೆಳಪರ್ಕಳದಲ್ಲಿರುವ ಶ್ರೀಗೋಪಾಲ ಕೃಷ್ಣ ದೇವಸ್ಥಾನದ ಮುಂದೆ ಇರುವ ಹಳೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.ನಿನ್ನೆ ರಾತ್ರಿ 9.30ರ ಸಮಯದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದ ಮಣಿಪಾಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.