ಡೈಲಿ ವಾರ್ತೆ:11 ಏಪ್ರಿಲ್ 2023
ಕುಂದಾಪುರ: ಬದ್ರಿಯಾ ಯಂಗ್ ಮೆನ್ಸ್ ಕೋಟೆ ಕೋಡಿ ಇವರ ವತಿಯಿಂದ ಬೃಹತ್ ಸೌಹಾರ್ದ ಇಪ್ತಾರ್ ಕೂಟ
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೆ ಕೋಡಿಯ ಬದ್ರಿಯಾ ಯಂಗ್ ಮೆನ್ಸ್ ತಂಡವು ಸಾಮಾಜಿಕ ಹಾಗೂ ಧಾರ್ಮಿಕವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಊರಿನ ಜನರ ಮನಸ್ಸು ಗೆದ್ದಿರುವ ಒಂದು ಕಮಿಟಿಯಾಗಿದೆ.
ರಂಝಾನ್ ತಿಂಗಳ ಉಪವಾಸದ ಹಿನ್ನಲೆಯಲ್ಲಿ ಬದ್ರಿಯಾ ಯಂಗ್ ಮೆನ್ಸ್ ಕೋಟೆ ಕೋಡಿ ಇವರ ವತಿಯಿಂದ ಏಪ್ರಿಲ್ 9ರಂದು ಸಂಜೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಬೃಹತ್ ಸೌಹಾರ್ದ ಇಪ್ತಾರ್ ಕೂಟ ನಡೆಯಿತು.
ಈ ಇಪ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸಿ ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು.
ಕೋಡಿ ಪರಿಸರದ ಮುಸ್ಲಿಂ ಯುವಕರ ತಂಡವಾದ ಬದ್ರಿಯಾ ಯಂಗ್ ಮೆನ್ಸ್ ಕಮಿಟಿಯಿಂದ ಆಯೋಜಿಸಿದ ಸೌಹಾರ್ದ ಕೂಟದಲ್ಲಿ ನೂರಾರು ಜನರು ಭಾಗವಹಿಸಿ ಉಪವಾಸ ಪಾರಾಯಣಗೈದರು.
ಈ ಸಂದರ್ಭ ಬದ್ರಿಯಾ ಯಂಗ್ ಮನ್ಸ್ ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಸಲ್ಮಾನ್ ಪಾರೀಶ್ ಹಾಗೂ ಕಮಿಟಿಯ ಗೌರವಾಧ್ಯಕ್ಷ ಆಸಿಫ್ ದುಬೈ ಮತ್ತು ಶಾರುಖ್ ದುಬೈ, ಬದ್ರಿಯ ಜುಮ್ಮಾ ಮಸೀದಿಯ ಖತಿಬ್ ಇಸ್ಮಾಯಿಲ್ ಸಖಾಫಿ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಬ್ಯಾರಿ, ಉಪಾಧ್ಯಕ್ಷ ಅಬ್ದುಲ್ ಕೋಟೆ, ಮೂಹಿಯದ್ದಿನ್ ಜುಮ್ಮಾ ಮಸೀದಿ ಕೋಡಿ ಇದರ ಅಧ್ಯಕ್ಷ ಜಿ. ಎಂ. ಮುಸ್ತಫಾ, ಕುಂದಾಪುರ ಪುರಸಭೆ ಸದಸ್ಯ ಅಷ್ಪಕ್ ಕೋಡಿ ಹಾಗೂ ಹಿಂದೂ ಬಾಂಧವರಾದ ಕೋಡಿ ಚಕ್ರಮ್ಮ ದೇವಸ್ಥಾನದ ಮೊಕ್ತೇಸರರಾದ ಗೋಪಾಲ ಪೂಜಾರಿ, ಶಂಕರ್ ಪೂಜಾರಿ, ಸಂಜೀವ ಕೋಡಿ, ತಿಮ್ಮಪ್ಪ ಖಾರ್ವಿ, ಗಂಗಾಧರ ದೀಪ ಎಲೆಕ್ಟ್ರಿಷಿಯನ್, ಸುನಿಲ್ ಕೋಡಿ, ಅರುಣ ಕೊಡಿ ಮತ್ತು ಊರಿನ ಗಣ್ಯರಾದ ಬಾಪು ಸೈನರ್, ಗಡಿ ಮುಹಮ್ಮದ್ ಹಾಗೂ ಊರ ಸಮಸ್ತ ಬಾಂಧವರು ಉಪಸ್ಥಿತರಿದ್ದರು.