ಡೈಲಿ ವಾರ್ತೆ:15 ಏಪ್ರಿಲ್ 2023

ದಕ್ಷಿಣಕನ್ನಡ: ಬೆಳ್ಳಾರೆಯ ಬಾಲಕ ನಾಪತ್ತೆ.!

ದಕ್ಷಿಣಕನ್ನಡ: ಬೆಳ್ಳಾರೆಯ ಅಬ್ದುಲ್ ರಝಾಕ್ ರವರ ಮಗ “ಮಹಮ್ಮದ್ ತಷ್ರಿಕ್ ನಿನ್ನೆ ಸಂಜೆಯಿಂದ ನಾಪತ್ತೆಯಾಗಿರುತ್ತಾನೆ.

ಸುಮಾರು ಹದಿನೈದು ವರ್ಷ ಪ್ರಾಯದ ಬಾಲಕ ನಿನ್ನೆ ಸಂಜೆ ಮನೆಯಿಂದ ಹೋದವನು ವಾಪಸು ಮನೆಗೆ ಬಂದಿರುವುದಿಲ್ಲ.

ಈ ಬಾಲಕ ಬೆಂಗಳೂರಿನ ಕಡೆ ಹೋಗಿರುವ ಸಂಶಯ ವ್ಯಕ್ತವಾಗಿದ್ದು ಬೆಂಗಳೂರು ಹಾಗೂ ಸುತ್ತ ಮುತ್ತ ನೆಲೆಸಿರುವ ಸಹೋದರರು ಈ ಬಾಲಕನ ಶೋದಕ್ಕಾಗಿ ಸಹಕರಿಸಬೇಕಾಗಿ ಬಾಲಕನ ತಂದೆ ಅಬ್ದುಲ್ ರಝಾಕ್ ವಿನಂತಿಸಿದ್ದಾರೆ. ಅಲ್ಲದೆ ಈತನ ಸುಳಿವು ಸಿಕ್ಕಿದಲ್ಲಿ ಈ ಮೊಬೈಲ್ ಸಂಖ್ಯೆಗೆ 8951743413, 9880219431
ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ.