ಡೈಲಿ ವಾರ್ತೆ:21 ಏಪ್ರಿಲ್ 2023

ಖ್ಯಾತ ಮಲಯಾಳಂ‌ ನಟ ಮಮ್ಮುಟ್ಟಿ ಅವರ ತಾಯಿ ನಿಧನ

ಕೇರಳ:ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ಇಂದು ನಿಧನರಾಗಿರುವ ಬಗ್ಗೆ ವರದಿಯಾಗಿದೆ.

93 ವರ್ಷದ ಫಾತಿಮಾ ಇಸ್ಮಾಯಿಲ್ ವಯೋಸಹಜ ಕಾಯಿಲೆಯಿಂದ ಕಳೆದ ಕೆಲ ವರ್ಷಗಳಿಂದ ಬಳಲುತ್ತಿದ್ದರು. ಇಂದು ಮುಂಜಾನೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಭಾರತೀಯ ಸಿನಿಮಾರಂಗದ ಖ್ಯಾತ ನಟರಾಗಿರುವ ಮಮ್ಮುಟ್ಟಿ ಅವರ ತಾಯಿಯ ನಿಧನಕ್ಕೆ ರಾಜಕೀಯ, ಸಿನಿಮಾ ರಂಗದ ಗಣ್ಯರು ಹಲವರು ಸಂತಾಪ ಸೂಚಿಸಿದ್ದಾರೆ.
ವರದಿಯ ಪ್ರಕಾರ ಇಂದು ಸಂಜೆ ಕೊಟ್ಟಾಯಂನ
ಚೆಂಪುವಿನ ಅವರ ಹುಟ್ಟೂರಲ್ಲಿ ದಫನ ಕಾರ್ಯ ನಡೆಯಲಿದೆ.

ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ.ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ.