ಡೈಲಿ ವಾರ್ತೆ:22 ಏಪ್ರಿಲ್ 2023

ಕೋಡಿ ಕನ್ಯಾಣ ಮೊಯ್ಯಿದ್ಧಿನ್ ಜುಮಾ ಮಸೀದಿಯಲ್ಲಿ ಸಂಭ್ರಮದ
‘ಈದುಲ್ ಫಿತ್ರ್’ ಆಚರಣೆ

ಕೋಟ: ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿ ಕೋಡಿ ಕನ್ಯಾಣದ ಮುಸ್ಲಿಮ್ ಬಾಂಧವರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು.


ಬೆಳಿಗ್ಗೆ 8 ಗಂಟೆಗೆ ಈದ್ ನಮಾಝ್ ಹಾಗೂ ಖುತ್ಬ ನೆರವೇರಿತು. ಬಳಿಕ ಹಲವು ವರ್ಷದಿಂದ ಮಸೀದಿಯಲ್ಲಿ ಉಸ್ತಾದಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶ್ರಫ್ ಮುಸ್ಲಿಯಾರ್ ಅವರ ಬೀಳ್ಕೊಡಿಗೆ ಸಮಾರಂಭ ನಡೆಯಿತು.

ಜಮಾತ್ ಬಾಂಧವರು ಅಶ್ರಫ್ ಮುಸ್ಲಿಯಾರ್ ಅವರನ್ನು ಮಸೀದಿಯ ಖತಿಬ್ ಸಿದ್ದಿಕ್ ಸಖಾಫಿ, ಜಮಾತ್ ಅಧ್ಯಕ್ಷ ಇಸ್ಮಾಯಿಲ್ ಬಿ ಕೆ, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಕಾರ್ಯದರ್ಶಿ ಕೆ. ಎಚ್. ಹುಸೇನ್, ಹಾಗೂ ಜಮಾತಿನ ಹಿರಿಯರು ಸೇರಿ ಸನ್ಮಾನಿಸಿದರು.
ನಂತರ ಜಮಾತ್ ಬಾಂಧವರು ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು.
ಹಾಗೇ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.