ಡೈಲಿ ವಾರ್ತೆ:22 ಏಪ್ರಿಲ್ 2023
ದ್ವಿತೀಯ ಪಿಯುಸಿ ಫಲಿತಾಂಶ : ಮೆಲ್ಕಾರ್ ಮಹಿಳಾ ಕಾಲೇಜು ವಿದ್ಯಾರ್ಥಿನಿ ಫಿದಾ ನಹೀಮಾ ಗೆ 90 ಶೇ ಅಂಕಗಳು
ಬಂಟ್ವಾಳ : ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಕಾಲೇಜು ವಿದ್ಯಾರ್ಥಿನಿ ಫಿದಾ ನಹೀಮಾ 538 ಅಂಕಗಳನ್ನು ಗಳಿಸಿ ಶೇ 90 ಫಲಿತಾಂಶ ಪಡೆದಿದ್ದಾಳೆ.
ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಫಿದಾ ನಹೀಮಾ 2022 – 23 ಸಾಲಿನಲ್ಲಿ ಮೆಲ್ಕಾರ್ ಮಹಿಳಾ ಕಾಲೇಜು ವಿದ್ಯಾರ್ಥಿನಿ ನಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾಳೆ. ಈಕೆ ಪತ್ರಕರ್ತ ಲತೀಫ್ ನೇರಳಕಟ್ಟೆ ಹಾಗೂ ನೂರ್ ಜಹಾನ್ ದಂಪತಿಗಳ ಪುತ್ರಿಯಾಗಿದ್ದಾಳೆ.