ಡೈಲಿ ವಾರ್ತೆ:25 ಏಪ್ರಿಲ್ 2023

ಬೆಂಗಳೂರಿನಲ್ಲಿ ಕಾರು, ಬೈಕ್ ಅಪಘಾತ: ಸುಳ್ಯದ ಯುವಕ ಸಾವು

ಸುಳ್ಯ: ಸುಳ್ಯದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಧರ್ಮಪಾಲ ಗೌಡ ಬಾಳೆಬೈಲು ಮತ್ತು ಕಮಲಾಕ್ಷಿ ದಂಪತಿ ಪುತ್ರ ಯತೀಶ್‌ ಬಾಳೆಬೈಲು (30) ಮೃತ ಯುವಕ.

ಯತೀಶ್‌ ಅವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅವಿವಾಹಿತರಾಗಿರುವ ಯತೀಶ್‌ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು.