ಡೈಲಿ ವಾರ್ತೆ:25 ಏಪ್ರಿಲ್ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ: ಜಿ.ಸಿ.ಕಾಲೇಜಿನಲ್ಲಿ ವಸಂತೋತ್ಸವ ಕಾರ್ಯಕ್ರಮದಲ್ಲಿ ಕಾವ್ಯಗಾಯನ ಮತ್ತು ಕವಿಗೋಷ್ಠಿ
ಅಂಕೋಲಾ : ವಸಂತ ಎನ್ನುವ ಸುಂದರ ಕಾಲದಲ್ಲಿ ಮರಗಳು ಪುನರ್ಜನ್ಮ ಮತ್ತು ವಸಂತಕಾಲದ ಮಾಂತ್ರಿಕತೆಯ ಬಹುಬಣ್ಣದ ಹೂವುಗಳು ಹಾಗೂ ಹಸಿರಿನ ಸೊಂಪಾದ ಹುಲ್ಲುಗಾವಲುಗಳ ಹರ್ಷೋ ದ್ಗಾರದಲ್ಲಿ ಹೃದಯಗಳನ್ನು ಮೋಡಿ ಮಾಡಲು ಒಂದು ಆಕರ್ಷಕ ಹಂತದಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಕೃತಿಯ ನಿಯಮ. ಇದನ್ನು ಬರಹಗಾರರು ಮತ್ತು ಕವಿಗಳು ವಸಂತ ಋತುವಿನ ಹೊಗಳಿಕೆಗೆ ಸಾಕಷ್ಟು ಪ್ರಮಾಣದ ಸಾಹಿತ್ಯ ಭಾಗವನ್ನು ಅರ್ಪಿಸಿದ್ದಾರೆ ಎಂದು ಕ.ಸಾ.ಪ. ಜಿಲ್ಲಾ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ಘಟಕವು ಇಲ್ಲಿಯ ಜಿ.ಸಿ.ಕಾಲೇಜಿನ ಯು.ಜಿ.ಸಿ. ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ ವಸಂತೋತ್ಸವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಗುಂದಿ ಮಾತನಾಡಿ, ವಸಂತ ಕಾಲದಲ್ಲಿ ವಲಸೆ ಹೋದ ಪ್ರಾಣ ಪಕ್ಷಿ ಗಳು ಗೂಡು ಸೇರುತ್ತದೆ. ಹೂ ಹಣ್ಣುಗಳು ಸಾಕ ಅನ್ನುವಷ್ಟು ಬೆಳೆದು ನಿಲ್ಲುವ ಜತೆ ಮನುಷ್ಯನ ಕಾರ್ಯ ಕುಶಲತೆಗೆ ಸಾಕಷ್ಟು ಅವಕಾಶ ಮಾಡಿಕೊಡುವ ಅವಧಿ ಎಂದರು. ಕ.ಸಾ.ಪ. ತಾಲೂಕ ಘಟಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ಕ.ಸಾ.ಪ.ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಉಪಸ್ಥಿತರಿ ದ್ದರು.
ಜಿ.ಸಿ.ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ವಸ್ತ್ರದ ಸ್ವಾಗತಿಸಿದರು. ಪಾಲ್ಗುಣ ಗೌಡ ಪ್ರಾಸ್ತಾವಿಕ ಮಾತನಾ ಡಿದರು. ಶಿಕ್ಷಕ ಬಾಲಚಂದ್ರ ನಾಯಕ ಭಾವಿಕೇರಿ, ವಿದ್ಯಾರ್ಥಿನಿ ಶ್ರೀನಿಧಿ ನಾಯಕ, ಕಸಾಪ ಗೌರವ ಕಾರ್ಯದರ್ಶಿ ಜಗದೀಶ ಜಿ. ನಾಯಕ ನಿರ್ವಹಿಸಿದರು.
ಕಾವ್ಯ ಗಾಯನ : ಕವಿಗಳು ಬರೆದಿರುವ ಕಾವ್ಯಗಾಯನವನ್ನು ಚೈತ್ರಾ ನಾಯಕ ಖಂಡಗಾರ, ಶೀತಲ ಆಗೇರ, ಪ್ರಶಾಂತ ಅಮದಳ್ಳಿ, ನೀತಾ ಶೇಟ್, ಸೀಮಾ ಗೌಡ ಹಡವ ಪ್ರಸ್ತುತ ಪಡಿಸಿದರು. ಗಾಯನಕ್ಕೆ ನಾಗರಾಜ ಜಾಂಬಳೇಕರ, ಪರಮೇಶ್ವರ ಹಿರೇಮಠ ಕೀಬೋರ್ಡ್ ಮತ್ತು ತಬಲಾ ಕಾರ್ಯವನ್ನು ನಡೆಸಿ ಕೊಟ್ಟರು.
ಕವಿಗೋಷ್ಠಿ : ನಾಗೇಂದ್ರ ನಾಯಕ ತೊರ್ಕೆ, ಸಿದ್ದಲಿಂಗಸ್ವಾಮಿ ವಸ್ತ್ರದ, ರಾಮಮೂರ್ತಿ ನಾಯಕ, ಬೀನಾ ನಾಯಕ, ನಾಗರಾಜ ಬಸವ ನಾಯ್ಕ, ರಮ್ಯಾ ಹೆಗಡೆ, ಸುವರ್ಣ ಶೆಟ್ಟಿ, ದಿನಕರ ನಾಯಕ ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.