



ಡೈಲಿ ವಾರ್ತೆ:25 ಏಪ್ರಿಲ್ 2023


ಉಡುಪಿ:ಗುಂಡಿಬೈಲು ಪ್ರದೇಶದಲ್ಲಿ ಹುಲ್ಲಿಗೆ ಬೆಂಕಿ – ನಗರದಲ್ಲಿ ದಟ್ಟ ಹೊಗೆ!
ಉಡುಪಿ: ನಗರದ ನಿಟ್ಟೂರಿನ ಗದ್ದೆ ಪ್ರದೇಶದಲ್ಲಿ ಇಂದು ಮಧ್ಯಾಹ್ನ ವೇಳೆ ಭಾರೀ ಬೆಂಕಿ ಕಾಣಸಿಕೊಂಡಿದ್ದು, ಇದರಿಂದ ದಟ್ಟ ಹೊಗೆ ಆವರಿಸಿ ಉಡುಪಿ ನಗರಕ್ಕೂ ವ್ಯಾಪ್ತಿದೆ.
ಮಧ್ಯಾಹ್ನ 2ಗಂಟೆ ಸುಮಾರಿಗೆ ನಿಟ್ಟೂರಿನ ಗದ್ದೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆ ಬೆಂಕಿ ಬನ್ನಂಜೆ, ಗುಂಡಿಬೈಲುವರೆಗಿನ ಗದ್ದೆಗೆ ವ್ಯಾಪಿಸಿದೆ. ಇದರಿಂದ ನವಿಲು, ಆಮೆ, ಮುಂಗುಸಿ, ಹಾವು ಸೇರಿದಂತೆ ಹಲವು ಪ್ರಾಣಿಗಳು ಬೆಂಕಿಗೆ ಬಲಿಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಮುಹಮ್ಮದ್ ಗೌಸ್ ನೇತೃತ್ವದಲ್ಲಿ ಉಡುಪಿ ಹಾಗೂ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ಮುಂದುವರೆಸಿದ್ದಾರೆ.
ಇದರಿಂದ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯು ಗಾಳಿಯಿಂದ ಉಡುಪಿ ನಗರಕ್ಕೂ ವ್ಯಾಪಿಸಿರುವುದು ಕಂಡುಬಂದಿದೆ.