ಡೈಲಿ ವಾರ್ತೆ:26 ಏಪ್ರಿಲ್ 2023
ಬ್ರೇಕಿಂಗ್ : ಮಾಜಿ ಸಿ ಎಂ ಜಗದೀಶ್ ಶೆಟ್ಟರ್ ಇಂದು 12.30ಕ್ಕೆ ತುರ್ತು ಸುದ್ದಿಗೋಷ್ಠಿ
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವತ್ತು ನಗರದ ಖಾಸಗಿ ಹೋಟೆಲ್‌ನಲ್ಲಿ 12:30 ಕ್ಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಮೊನ್ನೆಯಷ್ಟೇ ಸುದ್ದಿಗೋಷ್ಠಿ ಕರೆದು ಬಿ.ಎಲ್.ಸಂತೋಷ ಮೇಲೆ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಇವತ್ತು ಮತ್ತೆ ಯಾವ ಬಾಂಬ್ ಸಿಡಿಸಲಿದ್ದಾರೆ ಎನ್ನುವ ಕತೂಹಲ ಮೂಡಿದೆ.
ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆ ಇದೆ, ಕರ್ನಾಟಕದ ಬಿಜೆಪಿ ಒಬ್ಬ ವ್ಯಕ್ತಿ ಕೈಯಲ್ಲಿ ಇದೆ ಎಂದು ಕೆಂಡಾಮಂಡಲವಾಗಿದ್ದ ಶೆಟ್ಟರ್ ಇಂದು ಸುದ್ದಿಗೋಷ್ಠಿಯಲ್ಲಿ ಮತ್ಯಾವ ಬೆಂಕಿ ಚಂಡು ಉಗುಳುತ್ತಾರೆ ಗೊತ್ತಿಲ್ಲ. ಜೆ.ಪಿ.ನಡ್ಡಾ,ಅಮಿತ್ ಶಾ, ಬಿಎಸ್ ವೈ ಆಗಮನ, ನಿನ್ನೆಯಷ್ಟೇ ಬಿ.ಎಸ್ ವೈ ಶೆಟ್ಟರ್ ವಿರುದ್ಧ ಗುಡುಗಿರೋ ಬೆನ್ನಲ್ಲೇ ಶೆಟ್ಟರ್ ತುರ್ತು ಪತ್ರಿಕಾಗೋಷ್ಠಿ ಸಹಜ ಕುತೂಹಲ ಹುಟ್ಟಿಸಿದೆ.