ಡೈಲಿ ವಾರ್ತೆ:28 ಏಪ್ರಿಲ್ 2023

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತ ಓಂಕಾರ್ ಎಸ್ ವಿ ತಾಳಗುಪ್ಪರಿಂದ ಮಾನ್ಯ ಜಿಲ್ಲಾಧಿಕಾರಿಗೆ ದೂರು!

ಶಿವಮೊಗ್ಗ : ಕರ್ನಾಟಕ ವಿಧಾನಸಭಾ ಸಾರ್ವರ್ತಿಕ 2023 ರ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದೂ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ )ಬೆಂಗಳೂರು ರಾಜ್ಯಾಧ್ಯಕ್ಷ ಹಾಗೂ ಸರ್ಕಾರಿ ನೌಕರ ಷಡಕ್ಷರಿ ರವರು ಸರ್ಕಾರಿ ನೌಕರರಿಗೆ ಸರ್ಕಾರಿ ಸವಲತ್ತು ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ನೀಡುವುದಾಗಿ ತಾನೊಬ್ಬ ಸರ್ಕಾರಿ ನೌಕರಿಯಲ್ಲಿದ್ದರೂ ಹತ್ತು ಹಲವಾರು ಸರ್ಕಾರದ ಸವಲತ್ತುಗಳ ಆಮಿಷಗಳನ್ನೂ ನೀಡಿರುವುದು ಆಡಳಿತ ಪಕ್ಷದ ವಕ್ತಾರನಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ ಅಲ್ಲದೇ ಚುನಾವಣಾ ನೀತಿ ಸಂಹಿತೆ ಸಹಿತ ಉಲ್ಲಂಘನೆಯಾಗಿರುವುದು ಅಲ್ಲದೇ ಕರ್ತವ್ಯ ಲೋಪವಾಗಿರುವುದು ಅಷ್ಟೇ ಕಟುಸತ್ಯ. ಆದ್ದರಿಂದ ಷಡಕ್ಷರಿ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರಿಗೆ ಸಾಮಾಜಿಕ ಹೋರಾಟಗಾರ, ಮಾಹಿತಿ ಹಕ್ಕು ಕಾರ್ಯಕರ್ತ, ಮಾಧ್ಯಮ ವರದಿಗಾರ ಓಂಕಾರ್ ಎಸ್. ವಿ. ತಾಳಗುಪ್ಪ ಲಿಖಿತ ದೂರು ನೀಡಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಸರ್ವರಿಗೂ ಅನ್ವಯ… ತಪ್ಪು ಯಾರೇ ಮಾಡಿದರೂ ಶಿಕ್ಷೆ ಅನುಭವಿಸಲೇ ಬೇಕು… ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅಮರ್ ರಹೇ