ಡೈಲಿ ವಾರ್ತೆ:03 ಮೇ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಶರಾವತಿ ನದಿಯ ಒಡಲಿಗೆ ಕುತ್ತು.!
ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ನೆಡೆಯುತ್ತಿದೆ ಜಂಬಿಟ್ಟಿಗೆ ಕಲ್ಲು ಕೋರೆಗಳು – ಕಂದಾಯ ಇಲಾಖೆಯ ಅಧಿಕಾರಿಗಳು ನೇರ ಶಾಮೀಲು ಆರೋಪ!
ಸಾಗರ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕರೂರು ಹೋಬಳಿಯ ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಸರ್ಕಾರಿ ಸ್ವತ್ತಿನಲ್ಲಿ ಬಲ್ಲ ಮೂಲಗಳ ಮಾಹಿತಿ ಅನ್ವಯ ಈ ಪ್ರದೇಶಗಳು ನಿಷೇಧಿತ ವಲಯವಾಗಿದ್ದೂ, ನಿಷೇಧಿತ ಪ್ರದೇಶದಲ್ಲಿ ಜಂಬಿಟ್ಟಿಗೆ ಕಲ್ಲು ಕೋರೆಗಳು ಅಕ್ರಮವಾಗಿ ನೆಡೆಯುತ್ತಿದ್ದೂ, ಅಕ್ರಮಗಳಿಗೆ ಕಡಿವಾಣ ಹಾಕಬೇಕಾಗಿದ್ದ ಕಂದಾಯ ಇಲಾಖೆಯ ಕರ್ತವ್ಯ ನಿರತ ಅಧಿಕಾರಿಗಳು ಮಾತ್ರಾ ಕಣ್ಮುಚ್ಚಿ ಕುಳಿತು ಅಕ್ರಮವಾಗಿ ನೆಡೆಸುವ ಕಲ್ಲು ಕೋರೆಗಳ ಮಾಫಿಯಾದವರ ಎಸೆಯುವ ಕುರುಡು ಕಾಂಚನಕ್ಕೆ ಸರ್ಕಾರಿ ಭೂಮಿಯನ್ನೂ ಸಂರಕ್ಷಣೆ ಮಾಡದೇ ರಕ್ಷಕರೇ ಭಕ್ಷಕರಾಗಿರುವ ಬಗ್ಗೆ ಗಂಭೀರ ಆರೋಪವನ್ನೂ ಸ್ಥಳೀಯರು ಮಾಡುತ್ತಿದ್ದಾರೆ.
ಕೆಲವು ಮಾಸಗಳ ಹಿಂದೇ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆಯೇ ಜಂಬಿಟ್ಟಿಗೆ ಹೊತ್ತ ಟಿಪ್ಪರ್ ಚಾಲಕ ತನ್ನ ಟಿಪ್ಪರ್ ನ್ನೂ ಹರಿಸಿದ್ದು, ಪ್ರಾಣಾಪಾಯದಿಂದ ಯಾವುದೇ ಅವಘಡ ಸಂಭವಿಸಿಲ್ಲ ಎಂದು ವ್ಯಾಪಕ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೂ, ಈ ಘಟನೆ ನೆಡೆದ ಮೇಲೆ ಅಕ್ರಮ ಜಂಬಿಟ್ಟಿಗೆ ಕೋರೆಗೆ ಬ್ರೇಕ್ ಬಿದ್ದಿದ್ದೂ, ಈಗ ಪುನಃ ಪ್ರಾರಂಭವಾದ ಹಿಂದೇ ಕಾರಣ ಮಾತ್ರಾ ನಿಗೂಢ…. ?!*
ಶರಾವತಿ ನದಿಯ ಒಡಲಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಕಲ್ಲು ಕೋರೆಗಳು ನೆಡೆಯುತ್ತಿದ್ದೂ, ಮುಂದೊಂದು ದಿನ ಶರಾವತಿ ನದಿಗೆ ಕುತ್ತು ತರುವುದಲ್ಲದೇ, ವನ್ಯಜೀವಿಗಳಿಗೂ ಗಂಡಾಂತರ ಕಾದಿದೆ ಎಂದು ಕೂಡಲೇ ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ನೆಡೆಯುತ್ತಿರುವ ಅಕ್ರಮ ಜಂಬಿಟ್ಟಿಗೆ ಕಲ್ಲು ಕೋರೆ ಬ್ರೇಕ್ ಹಾಕಿ ನೆಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ಪರಿಸರವಾದಿಗಳು, ಪರಿಸರ ಪ್ರೇಮಿಗಳು, ವನ್ಯಜೀವಿ ಉಳಿಸಿ ಬೆಳಸಿ ಆಂದೋಲನದ ಕಾರ್ಯಕರ್ತರುಗಳು ಶಿವಮೊಗ್ಗ ಜಿಲ್ಲಾಡಳಿತ, ಕಂದಾಯ ಇಲಾಖೆ, KPTCL, KPCL, ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.