ಡೈಲಿ ವಾರ್ತೆ:03 ಮೇ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಜನಸ್ನೇಹಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಮನವಿಗೆ ಮನಸೋತ ಬಹಿಷ್ಕಾರಕ್ಕೆ ಕರೆ ಹಿಂಪಡೆದ ಮತದಾರರು!
ಕರೂರು & ಭಾರಂಗಿ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕರೂರು ಭಾರಂಗಿ ಹೋಬಳಿಯವರು ಇತ್ತೀಚಿಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ – 2023 ಚುನಾವಣೆಯನ್ನೂ ಮೂಲಭೂತ ಸೌಕರ್ಯಕ್ಕಾಗಿ ಬಹಿಷ್ಕಾರ ಮಾಡುವುದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಕೂಡಲೇ ಕಾರ್ಯಪ್ರವತ್ತರಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಕರೂರು, ಭಾರಂಗಿ ಹೋಬಳಿಗೆ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿ, ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ ವರನ್ನು ಮುಕ್ತವಾಗಿ ಸಭೆ ಸೇರಿಸಿ, ಅಹವಾಲುಗಳನ್ನೂ ಕೇಳಿ ಅಹವಾಲುಗಳನ್ನೂ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗನೇ ಈಡೇರಿಸುವ ಭರವಸೆಯನ್ನೂ ತಹಸೀಲ್ದಾರ್ ನೀಡಿದಾಗ, ಸಂತೋಷದಿಂದ ತಹಸೀಲ್ದಾರ್ ಮಾತಿಗೆ, ಭರವಸೆಗಳು ಈಡೇರಿಸುವ ನಂಬಿಕೆಯಿಂದ ಮತದಾನ ಬಹಿಷ್ಕಾರ ವಾಪಸ್ಸು ಪಡೆದು ನೆರೆದಿದ್ದ ಸಾರ್ವಜನಿಕರೂ 100 ಕ್ಕೆ 100 ಮತದಾನ ಮಾಡುವುದಾಗಿ ತಹಸೀಲ್ದಾರ್ ರವರಿಗೆ ತಿಳಿಸಿದರು.
ಇದ್ದರೆ ಇಂತಹ ಜನಸ್ನೇಹಿ ತಹಸೀಲ್ದಾರ್ ಇರಬೇಕು ಎಂದು ಸಭೆಯಲ್ಲಿ ನೆರೆದಿದ್ದ ನಾಗರೀಕರುಗಳ ಅಭಿಪ್ರಾಯವಾಗಿತ್ತು.