ಡೈಲಿ ವಾರ್ತೆ:07 ಮೇ 2023
ವರದಿ: ಕುಮಾರಿ ಭೂಮಿಕಾ ಬೆಂಗಳೂರು
ಅಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮಗಾನ
ಕೊಲ್ಲೂರು: ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಾಂಕ 06-05-2023 ರಂದು ಕೊಡಚಾದ್ರಿ ತಪ್ಪಲಿನ ಸೌಪರ್ಣಿಕ ನದಿ ತಟದಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರೌಢಶಾಲಾ ಮೈದಾನದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಲಾದ ಬೃಹತ್ “ಸುಪರ್ಣ ವೇದಿಕೆ” ಯಲ್ಲಿ ಬ್ರಹ್ಮಗಾನವನ್ನ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕರಾದ ಶ್ರೀಮತಿ ಎಂ.ಡಿ. ಪಲ್ಲವಿ, ಶ್ರೀ ಅಜಯ್ ವಾರಿಯರ್, ಶ್ರೀ ವಿನಯ್ ನಾಡಿಗ್ ಶ್ರೀಮತಿ ಶಶಿಕಲಾ ಸುನಿಲ್ ರವರ ತಂಡದಿಂದ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ವಿವಿಧ ಭಕ್ತಿ ಗೀತೆ, ಸುಗಮ ಸಂಗೀತ ಮತ್ತಯ ಭಾವ ಗೀತೆಗಳನ್ನ ಮೈಕಾಂಬಿಕೆ ದೇವಿಗೆ ಅರ್ಪಿಸಲಾಯ್ತು.
ಇವರಿಗೆ ಹಿನ್ನಲೆಯಾಗಿ ಪ್ರತಿಭಾನ್ವಿತ ವಾದ್ಯಗೋಷ್ಠಿಯ ತಂಡವು ಸಾಥ್ ನೀಡಿದ್ದು, ಕಾರ್ಯಕ್ರಮಕ್ಕೆ ಮೊದಲು ಸುಮಾರು 50 ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಧ್ವಾರದಿಂದ ರಥಬೀದಿಯಲ್ಲಿ ಸಾಗಿ ಸುಪರ್ಣ ವೇದಿಯನ್ನ ತಲುಪಿದ ಭಜನಾ ತಂಡವು ಕುಣಿತದೊಂದಿಗೆ ಸಾಗಿ ಸುಪರ್ಣ ವೇದಿಕೆಯಲ್ಲೂ ಭಜನೆಯನ್ನ ಮಾಡಿ ಶ್ರೀ ದೇವಿಗೆ ಅರ್ಪಸಿದರು.
ಭಜನಾ ತಂಡ ಮತ್ತು ಬ್ರಹ್ಮಗಾನ ತಂಡದವರಿಗೆ ಶ್ರೀ ದೇವಿಯ ಶಾಲು ಪ್ರಸಾದ ಮತ್ತು ಸ್ಮರಣಿಕೆ ನೀಡಿ ದೇವಸ್ಥಾನದ ವತಿಯಿಂದ ಗೌರವಿಸಲಾಯ್ತು. ಇನ್ನೂ ಈ ಕಾರ್ಯಕ್ರಮವೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇನ್ನೂ ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಸರ್ವ ಸದಸ್ಯರೂ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳಾದ ಎಸ್. ಸಿ. ಕೋಟಾರಗಸ್ತಿ ಉಪಸ್ಥಿತರಿದ್ದರು.