ಡೈಲಿ ವಾರ್ತೆ:10 ಮೇ 2023

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರಿಂದ ಮತದಾನ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ತಮ್ಮ ಸ್ವಕ್ಷೇತ್ರವಾದ ಮೊಳಹಳ್ಳಿಯ ನಾಲ್ಕನೇ ವಾರ್ಡಿನ ಮತಗಟ್ಟೆ ಕೈಲ್ಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಕರ್ನಾಟಕದಲ್ಲಿ 2023-28ರ ಅವಧಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಬುಧವಾರ ಬೆಳಿಗ್ಗೆ ಏಳು ಗಂಟೆಗೇ ಆರಂಭಗೊಂಡಿದ್ದು. ಯುವಕರು, ಮಹಿಳೆಯರು ಸೇರಿದಂತೆ ಹಿರಿಯ ಮತದಾರರು ಉತ್ಸಾಹದಿಂದ ಆಗಮಿಸಿ ಬೆಳಿಗ್ಗೆ 6.45 ಕ್ಕೇ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು ಈ ವರ್ಷದ ಚುನಾವಣೆಯ ವಿಶೇಷವಾಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209592 ಮತದಾರರಿದ್ದಾರೆ. ಒಟ್ಟು 222 ಮತಗಟ್ಟೆಗಳಿವೆ. ಇದರಲ್ಲಿ 38 ನಗರ ಪ್ರದೇಶ, 184 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ.