ಡೈಲಿ ವಾರ್ತೆ:10 ಮೇ 2023

ಕಾಪು:ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ನವ ವಧು

ಕಾಪು: ಮತದಾನ ಪ್ರತೀ ಪ್ರಜೆಯ ಮೂಲಭೂತ ಹಕ್ಕು. ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ನವ ವಧುವೊಬ್ಬರು ಗಮನ ಸೆಳೆದ ಘಟನೆ ನಡೆಯಿತು.

ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲುವಿನ ಮಟ್ಟು ಮತಗಟ್ಟೆಯಲ್ಲಿ ನವ ವಧು ಮೆಲಿಟಾ ತಮ್ಮ ಹಕ್ಕು ಚಲಾಯಿಸುವ ಮೂಲಕ ಜವಾಬ್ದಾರಿ ಮೆರೆದರು. ಮತ ಚಲಾಯಿಸಿದ ಬಳಿಕ ಇವರು ತಮ್ಮ ಮದುವೆ ಕಾರ್ಯಕ್ರಮಕ್ಕಾಗಿ ನೇರ ಚರ್ಚ್ ಗೆ ತೆರಳಿದರು.