ಡೈಲಿ ವಾರ್ತೆ:10 ಮೇ 2023

ಕೋಟತಟ್ಟು ಪಡುಕರೆ ಬೂತ್ ಸಂಖ್ಯೆ 163 ರಲ್ಲಿ ಕೈಕೊಟ್ಟ ಮತಯಂತ್ರ: ಮತದಾರರಲ್ಲಿ ಗೊಂದಲ

ಕೋಟ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಪಡುಕರೆ ಸ. ಹಿ. ಪ್ರಾ. ಶಾಲೆಯ ಮತಗಟ್ಟೆ‌ ಸಂಖ್ಯೆ 163 ರಲ್ಲಿ ಮತ ಯಂತ್ರ ಹಾಳಾಗಿ‌ ಸುಮಾರು‌ ಒಂದು ಗಂಟೆ ಮತದಾನ ಸ್ಥಗಿತಗೊಂಡ ಘಟನೆ ನಡೆಯಿತು.

ಬೆಳಿಗ್ಗೆ 7 ರಿಂದ ಸರಾಗವಾಗಿ ಮತದಾನ‌ ಪ್ರಕ್ರಿಯೆ‌ ಆರಂಭವಾಗಿತ್ತಾದರೂ, 10ಗಂಟೆ ಸುಮಾರಿಗೆ ಮತಯಂತ್ರ ಸ್ಥಗಿತಗೊಂಡಿತು. ಸುಮಾರು 337 ಮತದಾರರು ಮತದಾನ ಮಾಡಿದ್ದರು. ನಂತರ ಬದಲಿ ಮತಯಂತ್ರ ಬರುವುದಕ್ಕೆ ಒಂದು ಗಂಟೆವರೆಗೆ‌ ಕಾದ ಮತದಾರರು ಚುನಾವಣಾ ವ್ಯವಸ್ಥೆಗೆ ಹಿಡಿಶಾಪ ಹಾಕಿ‌ ಕೆಲ ಮತದಾರರು ಮನೆಗೆ ವಾಪಾಸು ತೆರಳಿದರು. ಬಿರು ಬೇಸಿಗೆಯಲ್ಲಿ ಮತದಾನಕ್ಕೆ ಬಂದಿದ್ದ ಕೆಲವರು ಮತಯಂತ್ರ ಕೈಕೊಟ್ಟಿದ್ದಕ್ಕೆ ನಿರಾಸೆ‌ಯಾದರೂ ಒಂದು ಗಂಟೆ ಕೂತು ಮತದಾನ‌ ಮಾಡಿ ಮನೆಗೆ ತೆರಳಿದರು.