ಡೈಲಿ ವಾರ್ತೆ:10 ಮೇ 2023
ವರದಿ: ಕುಮಾರಿ ಭೂಮಿಕಾ ವಿ. ಬೆಂಗಳೂರು
ಕೊಲ್ಲೂರು: ಅಷ್ಟಬಂಧ ಬ್ರಹ್ಮಕಲಶೋತ್ಸವದಿಂದ ಪಾವಿತ್ರತೆ ವೃದ್ಧಿಸಿಕೊಂಡ ತಾಯಿ ಮೂಕಾಂಬಿಕೆಯ ರಥೋತ್ಸವ
ಕೊಲ್ಲೂರು : ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ 09-05-2023 ರಂದು ಶ್ರೀ ಮನ್ಮಹಾರಥೋತ್ಸವವು ನಡೆಯಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ನಡೆದಂತಹ ಈ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ರು. ಬೆಳಗ್ಗೆ 12:15 ರ ಸುಮಾರಿಗೆ ರಥಾರೋಹಣಕ್ಕೆ ಚಾಲನೆ ನೀಡಲಾಗಿದ್ದು, ಮಹಾದ್ವಾರದ ಮುಂಬಾಗಿಲಿನಿಂದ ಹೊರಟ ರಾಥವು…..ಸಂಜೆ 5:30 ಕ್ಕೆ ಮೆರವಣಿಗೆ ಮೂಲಕ ಓಲಗ ಮಂಟಪಕ್ಕೆ ತೆರಳಿತ್ತು. ಮೆರವಣಿಗೆಯ ದಾರಿಯುದ್ದಕ್ಕೂ ವಿವಿಧ ರೀತಿಯ ಕಲಾ ತಂಡಗಳೂ ರಥೋತ್ಸವದಲ್ಲಿ ಪಾಲ್ಗೊಂಡವು.
ತಂತ್ರಿಗಳಾದ ಡಾ. ಕೆ. ಎನ್. ನಿತ್ಯಾನಂದ ಅಡಿಗರ ನೇತೃತ್ವದಲ್ಲಿ ನಡೆದಂತಹ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬ್ರಹ್ಮರಥದ ವಿಧಿವಿಧಾನ ನಡೆಯಿತು. ಬೆಳಗ್ಗೆ ಅಧಿವಾಸಹೋಮ, ರಥಶುದ್ಧಿ ಹೋಮ, ಮಹಾಪೂಜೆ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವವೂ ನಡೆಯಿತು. ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವದ ಸಂಭ್ರಮ ಜರುಗಿದ್ದು, ಬ್ರಹ್ಮಕಲಶೋತ್ಸವದ ಸಲುವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಗಳು ಮೇ 11 ನೇ ತಾರೀಕಿನಂದು ಪೂರ್ಣಕುಂಭಶಭಿಷೇಕ ಹಾಗೂ ಆಶೀರ್ವಚನದೊಂದಿಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸಿದಂತಹ ಸಹಸ್ರಾರು ಭಕ್ತಾಧಿಗಳು ಮೂಕಾಂಬಿಕೆಗೆ ಪ್ರಾರ್ಥನೆ ಸಲ್ಲಿಸಿ ತೇರು ಎಳೆಯುವ ದೃಶ್ಯಗಳು ಕಂಡು ಬಂತು.
ರಥೋತ್ಸವ ಸಾಗಿದ ದಾರಿಯುದ್ದಕ್ಕೂ ಜಗನ್ಮಾತೆ ಜಗತ್ ಜನನಿ ಮೂಕಾಂಬಿಕೆಯ ಭಕ್ತರೂ ತೇರು ಎಳೆಯುತ್ತಿರುವಂತಹ ದೃಶ್ಯಗಳನ್ನ ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯವೇ ಸರಿ. ಇದೀಗ ದಶಕದ ಬಳಿಕ ನಡೆದಂತಹ ಈ ಪುಣ್ಯ ಕಾರ್ಯದ ರಥಾಹರೋಹಣದ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಸಿ ಕೋಟಾರಗಸ್ತಿ, ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗಣೇಶ ಕಿಣಿ ಬೆಳ್ವೆ, ಸಂಧ್ಯಾ ರಮೇಶ್, ಗೋಪಾಲ ಕೃಷ್ಣ ನಾಡ, ಶೇಖರ್ ಪೂಜಾರಿ, ರತ್ಯಾ ಆರ್. ಕುಂದರ್, ಗೋವಿಂದ ನಾಯ್ಕ ಮತ್ತು ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.