

ಡೈಲಿ ವಾರ್ತೆ: ಫೆ./15/2026
ಯೂಟ್ಯೂಬ್ ಜಾಹೀರಾತಿಗೆ ಮರುಳಾದ ವೃದ್ಧ: ಕೋಟದಲ್ಲಿ ₹1.07 ಲಕ್ಷ ಸೈಬರ್ ವಂಚನೆ!

ಕೋಟ: ಯೂಟ್ಯೂಬ್‌ನಲ್ಲಿ ಬಂದ ಆಕರ್ಷಕ ಜಾಹೀರಾತಿಗೆ ಮರುಳಾಗಿ 73 ವರ್ಷದ ವೃದ್ಧರು ₹1,07,617.99 ಹಣ ಕಳೆದುಕೊಂಡ ಘಟನೆ ಕೋಟದಲ್ಲಿ ಬೆಳಕಿಗೆ ಬಂದಿದೆ.
ದೂರುದಾರ ರಮೇಶ ಮಯ್ಯ (73), ದಿ/ಪಟ್ಟಾಬಿರಾಮಮಯ್ಯ ಅವರ ಪುತ್ರ, ದಾನಗುಂದು ರಸ್ತೆ, ಪರ್ಣಿಕಾ 3-104(8), ಕೋಟ ನಿವಾಸಿಯಾಗಿದ್ದು, ದಿನಾಂಕ 20.09.2025 ರಂದು ಯೂಟ್ಯೂಬ್ ಜಾಹೀರಾತಿನ ಪ್ರಕಾರ ಆನ್‌ಲೈನ್ ಮೂಲಕ ₹17,617.99 ಪಾವತಿ ಮಾಡಿದ್ದಾರೆ. ಬಳಿಕ 28.11.2025 ರಂದು ಮತ್ತೊಮ್ಮೆ ₹90,000 ಹಣ ವರ್ಗಾವಣೆ ಮಾಡಿದ್ದಾರೆ.
ಈ ಎರಡೂ ಮೊತ್ತಗಳು ಪುಣೆಯಲ್ಲಿರುವ HDFC ಬ್ಯಾಂಕ್, Aundh Pune ಶಾಖೆಯ SB ಖಾತೆ ಸಂಖ್ಯೆ 00521000002663ಕ್ಕೆ ವರ್ಗಾವಣೆಯಾಗಿರುವುದಾಗಿ ತಿಳಿದುಬಂದಿದೆ.
ಒಟ್ಟು ₹1,07,617.99 ಹಣವನ್ನು ಸೈಬರ್ ವಂಚಕರು ಮೋಸಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 26/2026 ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(c) ಮತ್ತು 66(d) ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪೊಲೀಸರು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್ ಜಾಹೀರಾತುಗಳ ಮೂಲಕ ಬರುವ ಆಕರ್ಷಕ ಆಫರ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.