

ಡೈಲಿ ವಾರ್ತೆ: ಫೆ./15/2026
ಕರವೇ ಉಡುಪಿ ಜಿಲ್ಲಾ ಸಂಘಟನೆಗೆ ಮಹಿಳಾ ಸದಸ್ಯರ ಸೇರ್ಪಡೆ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಹೋರಾಟ ಹಾಗೂ ಜನಪರ ಕಾಳಜಿಯನ್ನು ಇಟ್ಟುಕೊಂಡು ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಘಟನೆ.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯ ವೈಖರಿಯನ್ನು ಮೆಚ್ಚಿ ಸಂಘಟನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು 5 ಜನ ಮಹಿಳಾ ಸದಸ್ಯರು ಉಡುಪಿಯ ಮಥುರಾ ಛತ್ರದಲ್ಲಿ ಸಂಘಟನೆಗೆ ಸೇರ್ಪಡೆಗೊಂಡರು.
ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಗೌರವಾಧ್ಯಾಕ್ಷರಾದ ಅನ್ಸಾರ್ ಅಹಮದ್ ರವರ ಅನುಮತಿಯನ್ನು ಕೋರಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಾದ ವಿಶಾಲಿ, ಮಾಧವಿ, ವಿಜಯ, ಜಯಂತಿ, ಮಂಜುಳಾ, ಸಂಘಟನೆಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠ ಗೊಳಿಸುವಲ್ಲಿ ಎಲ್ಲರೂ ಸೇರಿ ಜೊತೆಯಾಗಿ ಶ್ರಮಿಸೋಣ ಎಂದು ಮಹಿಳೆಯರಿಗೆ ಕರೆ ನೀಡಿದರು.
ಕರವೇ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರರಾದ ಸವಿತಾ, ಪವಿತ್ರ ಶೆಟ್ಟಿ, ಮೀರಾ ಸಾವಂತ್, ಜಯಪ್ರಕಾಶ್ ರವರ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.