ಡೈಲಿ ವಾರ್ತೆ:14 ಮೇ 2023
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪಕ್ಷಾಂತರ ಮಾಡಿದ 16 ಮಂದಿಯಲ್ಲಿ ಈ ಬಾರಿ ಸೋತ ಘಟಾನುಘಟಿಗಳು.!
ಬೆಂಗಳೂರು;ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಬಿಜೆಪಿ ಸರ್ಕಾರದ ರಚನೆಗೆ ಸಾಥ್ ನೀಡಿದ್ದ 16 ಮಂದಿ ರೆಬೆಲ್ ಶಾಸಕರ ಪೈಕಿ 15 ಮಂದಿ ಸೋಲನ್ನು ಕಂಡಿದ್ದಾರೆ. ಓರ್ವರು ಸ್ಪರ್ಧೆಯನ್ನೇ ಮಾಡಿಲ್ಲ.
ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದವರನ್ನು ಈಗ ಜನರು ಹೊರಗಟ್ಟಿದ್ದಾರೆ. ಕಾಂಗ್ರೆಸ್‌ನಿಂದ 13 ಹಾಗೂ ಜೆಡಿಎಸ್‌ನಿಂದ 03 ಸೇರಿದಂತೆ ಒಟ್ಟು 16 ಜನರು ಪಕ್ಷಾಂತರ ಮಾಡಿದ್ದರು.
ಈ ಚುನಾವಣೆಯಲ್ಲಿ ರೆಬೆಲ್ ಶಾಸಕರಾಗಿದ್ದ 15 ಮಂದಿಗೆ ಟಿಕೆಟ್ ನೀಡಲಾಗಿತ್ತು. ಹೆಚ್ ವಿಶ್ವನಾಥ್ ಸ್ಪರ್ಧಿಸಿರಲಿಲ್ಲ.
ರೆಬೆಲ್ ಬಿಜೆಪಿ ಶಾಸಕರ ಸೋಲು – ಗೆಲುವು:
ಮಹೇಶ ಕುಮಟಳ್ಳಿ (ಅಥಣಿ) – ಸೋಲು
ಶ್ರೀಮಂತಗೌಡ ಪಾಟೀಲ (ಕಾಗವಾಡ) – ಸೋಲು
ಶಿವರಾಮ ಹೆಬ್ಬಾರ್ (ಯಲ್ಲಾಪುರ) – ಸೋಲು
ಬಿ.ಸಿ.ಪಾಟೀಲ್ (ಹಿರೇಕೆರೂರು) – ಸೋಲು
ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ (ವಿಜಯನಗರ) – ಸೋಲನ್ನು ಕಂಡಿದ್ದಾರೆ.
ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ) – ಸೋಲು
ಎಂಟಿಬಿ ನಾಗರಾಜ್ (ಹೊಸಕೋಟೆ) – ಸೋಲು
ಕೆ.ಸಿ. ನಾರಾಯಣಗೌಡ (ಕೃಷ್ಣರಾಜಪೇಟೆ) – ಸೋಲು
ಪ್ರತಾಪ್‌ಗೌಡ ಪಾಟೀಲ್ (ಮಸ್ಕಿ) – ಸೋಲು
ರಮೇಶ ಜಾರಕಿಹೊಳಿ (ಗೋಕಾಕ) – ಗೆಲುವು
ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) – ಗೆಲುವು
ಬೈರತಿ ಬಸವರಾಜ್ (ಕೆಆರ್ ಪುರಂ) – ಗೆಲುವು
ಎಸ್ ಟಿ ಸೋಮಶೇಖರ್ (ಯಶವಂತಪುರ) – ಗೆಲುವು
ಮುನಿರತ್ನ (ರಾಜರಾಜೇಶ್ವರಿ ನಗರ) – ಗೆಲುವು
ಈ ಬಾರಿ ಕಾಂಗ್ರೆಸ್‌ಗೆ ಭಾರಿ ಪ್ರಮಾಣದಲ್ಲಿ ಜನರು ಬಹುಮತವನ್ನು ನೀಡಿದ್ದಾರೆ.
135 ಸ್ಥಾನಗಳನ್ನು ಬರುವಂತೆ ಮಾಡಿದ್ದಾರೆ. ಕಳೆದ ಬಾರಿ ಬಿಜೆಪಿಯ ಬೊಮ್ಮಯಿ ಸರಕಾರದ ಆಡಳಿತ ಹಾಗೂ ಭ್ರಷ್ಟಾಚಾರದ ಆರೋಪಗಳು ಬಿಜೆಪಿಗೆ ಹೀನಾಯ ಸೋಲಿಗೆ ಕಾರಣವಾಗಿದೆ.