ಡೈಲಿ ವಾರ್ತೆ:18 ಮೇ 2023

ಗೋವಾದಲ್ಲಿ ನಡೆದ 18ನೇ ರಾಷ್ಟ್ರಮಟ್ಟದ ಅಬಾಕಸ್ 2023 ಸ್ಪರ್ದೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆಯ ವಿಜೇತ ವಿದ್ಯಾರ್ಥಿಗಳು

ಕೋಟ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಫ್ರೈ.ಲಿ ವತಿಯಿಂದ ಗೋವಾದಲ್ಲಿ ನಡೆದ 18ನೇ ರಾಷ್ಟ್ರಮಟ್ಟದ ಅಬಾಕಸ್ 2023 ಸ್ಪರ್ದೆಯಲ್ಲಿ ಕೋಟ ಎಜ್ಯುಕೇರ್ ಸಂಸ್ಥೆ ವತಿಯಿಂದ ಭಾಗವಹಿಸಿದ ರಾಮ ಮೊಗೇರ ಹೈಸ್ಕೂಲ್ ಕಾರ್ಕಳ ಮತ್ತು ನಾಗರತ್ನ ಗುಂಡ್ಮಿ ಶಿಕ್ಷಕರು ಕೋಟ ಪಡುಕರೆ ಇವರ ಪುತ್ರರಾದ ಪ್ರಕುಲ್ ಮೆಂಡನ್ ಪ್ರಥಮ ಸ್ಥಾನ ಹಾಗೂ ಶಿಖರ್ ಮೆಂಡನ್ ದ್ವಿತೀಯ ಸ್ಥಾನ. ಕೋಟ ದೀಪಿಕಾ ಆರ್ ಮತ್ತು ಜಿ ಎ ರವಿ ಇವರ ಪುತ್ರ ಆದಿತ್ಯ. ಆರ್. ಕೋಟ ದ್ವಿತೀಯ ಸ್ಥಾನ. ಸಾಲಿಗ್ರಾಮ ರವಿಜಾ ಹಾಗೂ ವಿಜಯ್ ಇವರ ಪುತ್ರಿ ಧನ್ವಿ.ವಿ ಕೊಠಾರಿ ದ್ವಿತೀಯ ಸ್ಥಾನ, ಸಾಲಿಗ್ರಾಮ ದೇವೇಂದ್ರ.ಕೆ ಹಾಗೂ ಹೇಮ ಇವರ ಪುತ್ರ ಸಮನ್ಯು ಡಿ ಪೂಜಾರಿ ದ್ವಿತೀಯಸ್ಥಾನ. ಶ್ಯಾಮ್ ಮರಕಾಲಗುಂಡ್ಮಿ ಹಾಗೂ ಶಶಿಕಲಾ ಇವರ ಪುತ್ರಿ ಪ್ರಗತಿ ಎಸ್ ಮೆಂಡನ್ ದ್ವಿತೀಯಸ್ಥಾನ.
ತೆಕ್ಕಟ್ಟೆ ವಿಜಯ ಮೊಗವೀರ ಹಾಗೂ ವಿಜಯ .ಎ ಇವರ ಪುತ್ರ ಕೌಸ್ತುಬ್ ದ್ವಿತೀಯಸ್ಥಾನ.ಕೋಟ ಪಡುಕರೆ ಸತೀಶ್ ಪೂಜಾರಿ ಹಾಗೂ ಆಶಾ ಇವರ ಪುತ್ರಆತೀಷ್.ಎಸ್.ಪೂಜಾರಿ ದ್ವಿತೀಯಸ್ಥಾನ. ಹಂದಟ್ಟು ಭಾಸ್ಕರ್ ಪೂಜಾರಿಹಾಗೂ ರಜನಿ ಇವರ ಪುತ್ರ ಹಾರ್ದಿಕ ಬಿಲ್ಲವ ತೃತೀಯ ಸ್ಥಾನ. ಬಾಳೆಬೇಟ್ಟು ವಾರಿಜ ಶಿವಾನಂದ ಪೂಜಾರಿಇವರ ಪುತ್ರ ಗಹನ್.ಪಿ ತೃತೀಯ ಸ್ಥಾನ. ಶ್ಯಾಮ್ ಮರಕಾಲ ಗುಂಡ್ಮಿ ಹಾಗೂ ಶಶಿಕಲಾ ಇವರ ಪುತ್ರ ಪ್ರೀತಮ್.ಎಸ್.ಮೆಂಡನ್ ತೃತೀಯಸ್ಥಾನ. ಕೋಟತಟ್ಟು ರಾಘವೇಂದ್ರ ಕಾಂಚನ್ ಹಾಗೂ ಸುಪ್ರೀತಾ ಮೊಗವೀರ್ ಇವರ ಪುತ್ರ ರಿಷಿ. ಆರ್. ಮೊಗವೀರ್ 4ನೇ ಸ್ಥಾನ. ಬೆಟ್ಟಲಕ್ಕಿ ಮಹೇಶ್ ಹಾಗೂ ಉಷಾ ಇವರ ಪುತ್ರ ಕ್ರತೀಶ್ ಯಾನೆ ಮನೀಷ್ 5ನೇ ಸ್ಥಾನ. ಕೋಟ ಲಲೀತ ಹಾಗೂ ಕ್ರಷ್ಣ ಇವರ ಪುತ್ರ ಸೂರ್ಯ 5ನೇಸ್ಥಾನ. ಪಡೆದಿರುತ್ತಾರೆ.

ಪ್ರಸನ್ನ ಕೆ ಬಿ ಹಾಗೂ ಸುಪ್ರೀತಾ ಮೊಗವೀರ್ ಇವರು ತರಬೇತುದಾರರಾಗಿದ್ದಾರೆ ಎಂದು ಕೋಟ ಎಜ್ಯುಕೇರ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ಚೇತನ ಎಂ ತಿಳಿಸಿರುತ್ತಾರೆ.