ಡೈಲಿ ವಾರ್ತೆ:21 ಮೇ 2023
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ಸ್ಟೇಬಲ್!
ಕಲಬುರಗಿ: ಕಲಬುರಗಿ ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಾಂಡುರಂಗ (47) ನೇಣು ಬಿಗಿದುಕೊಂಡು ಮೃತಪಟ್ಟವರು. ಪಾಂಡುರಂಗ ಕಲಬುರಗಿಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಆಗಿದ್ದಾರೆ.
ನೇಣಿಗೆ ಶರಣಾದ ಪಾಂಡುರಂಗ ಶನಿವಾರ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ ಪಾಂಡುರಂಗ, ಕುಟುಂಬ ಸದಸ್ಯರೊಂದಿಗೆ ಊಟ ಮುಗಿಸಿದ್ದಾರೆ. ಬಳಿಕ ಪಾಂಡುರಂಗ ಅವರ ಇಬ್ಬರು ಮಕ್ಕಳು ಮನೆಯೊಳಗೆ ಸೆಕೆ ಎಂದು ಮನೆಯ ಚಾವಣಿಯಲ್ಲಿ ಮಲಗಿದ್ದರು. ಪತಿ-ಪತ್ನಿ ಇಬ್ಬರು ಕ್ವಾಟರ್ಸ್ನ ಬೆಡ್ ರೂಂನಲ್ಲಿ ಮಲಗಿದ್ದರು. ಆದರೆ, ನಸುಕಿನ ಜಾವ ಮನೆಯ ಅಡುಗೆ ಕೋಣೆಯಲ್ಲಿ ಪಾಂಡುರಂಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.