ಡೈಲಿ ವಾರ್ತೆ:23 ಮೇ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಸೋರುತ್ತಿವುದು ಕುಡಿಯುವ ನೀರಿನ ಟ್ಯಾಂಕ್: ಸರ್ಕಾರಿ ಅನುದಾನ ನೀರಲ್ಲಿ ಹೋಮ – ಕಳಪೆ ಕಾಮಗಾರಿಯೇ 40% ಕಮಿಷನ್ ದಂಧೆ.?
ಜನ್ನೇಹಕ್ಲು :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ಶಿರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನೇಹಕ್ಲು ಸಮೀಪದ ಗುಡ್ಡದಲ್ಲಿ ಅಂದಾಜು ಮೊತ್ತ 6:ಕೋಟಿ ಮೊತ್ತದಲ್ಲಿ ನಿರ್ಮಿಸಿದ ಬಹು ಗ್ರಾಮ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದೂ, ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣ ಸೋರುತ್ತಿದ್ದೂ ಸಾರ್ವಜನಿಕ ತೆರಿಗೆ ಹಣ ಸೋರುತ್ತಿರುವ ಟ್ಯಾಂಕ್ ನಲ್ಲಿ ನೀರಲ್ಲಿ ಹೋಮವಾಗಿದೆ.
ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಶರಾವತಿ ನದಿಯ ನೀರು ಸಾಗರದ ಪಟ್ಟಣಕ್ಕೆ ಸಾಗುವಾಗ ದಾರಿಯಲ್ಲಿರುವ ಗ್ರಾಮಗಳಿಗೆ ಕುಡಿಯುವ ನೀರು ಹಳ್ಳಿಗರಿಗೆ ದೊರೆಯಲಿ ಎಂದು ಬಹು ಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೆ ತಂದು ನೂರಾರು ಕೋಟಿ ಮಂಜೂರಾಗಿದ್ದು ಸರಿಯಷ್ಟೇ ಆದರೇ ಈ ಕುಡಿಯುವ ನೀರಿನ ಟ್ಯಾಂಕ್ ಮಾತ್ರಾ ಒಂದೇ ಒಂದೂ ತೊಟ್ಟು ನೀರು ತುಂಬಿಟ್ಟು ಕೊಳ್ಳಲು ಅಶಕ್ತವಾಗಿದೆ. ಕಳಪೆ ಕಾಮಗಾರಿ ನಿರ್ವಹಣೆಯೇ ಈ ಕುಡಿಯುವ ನೀರಿನ ಟ್ಯಾಂಕ್ ಸೋರಲು ಕಾರಣವಾಗಿದೆ ಎಂದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.
ಶಿವಮೊಗ್ಗ ಜಿಲ್ಲೆಯ ಧಕ್ಷ, ಪ್ರಾಮಾಣಿಕ ಅಧಿಕಾರಿ, ಜನಸ್ನೇಹಿ, ಆಡಳಿತದಲ್ಲಿ ಪಾರದರ್ಶಕ ಆಡಳಿತಗಾರರಾದ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ. ಸೇಲ್ವಮಣಿ ರವರು ಈ ಸಾರ್ವಜನಿಕ ತೆರಿಗೆ ಹಣ ದುರುಪಯೋಗ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ತನಿಖೆ ನೆಡೆಸಿ, ಕಳಪೆ ಕಾಮಗಾರಿಯಲ್ಲಿ ಬಾದಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಕೋರಿದ್ದಾರೆ.
ಮಾಹಿತಿ, ಫೋಟೋ, ವಿಡಿಯೋ ಸಹಕಾರ :ಜಯರಾಮ್ ಸೂರನಗದ್ದೆ ಅಧ್ಯಕ್ಷರು ಕ.ರ.ವೇ ಸಾಗರ ತಾಲ್ಲೂಕು