ಡೈಲಿ ವಾರ್ತೆ:26 ಮೇ 2023

ಅನ್ನ ಭಾಗ್ಯದ ಅಕ್ಕಿಗೆ ಕಣ್ಗಾವಲು ವೇದಿಕೆ.!

ಕರ್ನಾಟಕ ಸರಕಾರದ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಅಕ್ಕಿ ಹಸಿದವರಿಗೆ ಸಿಗಬೇಕು ಎನ್ನುವ ಹಂಬಲದಲ್ಲಿ ಸಮಾನ ಚಿಂತನೆಯುಳ್ಳ ತಂಡವೊಂದು ರಾಜ್ಯ ಮಟ್ಟದಲ್ಲಿ ಉದಯಿಸಿದೆ.

ಮೇ 20 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ನಾಗರಾಜ ಗಾಣಿಗ ನೇತೃತ್ವದಲ್ಲಿ ರಾಜ್ಯದಾದ್ಯಂತ ಮುಂದಿನ ತಂಡದ ಆಯ್ಕೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಕರ್ನಾಟಕದ ಪ್ರತಿ ಜಿಲ್ಲೆಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ವೇದಿಕೆಯ ಶಾಖೆ ರಚಿಸಿ ಹೋರಾಟದ ರೀತಿಯನ್ನು ಸಿದ್ಧಪಡಿಸುವ ಬಗ್ಗೆ ಚರ್ಚಿಸಲಾಯಿತು.

ಅನ್ನ ಭಾಗ್ಯದ ಅಕ್ಕಿ ವ್ಯಾಪಾರಿಗಳ ಪಾಲಾಗಕೂಡದು. ಅದು ಹಸಿದ ಹೊಟ್ಟೆಗೆ ತುತ್ತಾಗಬೇಕು. ಅಗತ್ಯ ಇದ್ದಲ್ಲಿ ಮಾತ್ರ ಉಚಿತ ಅಕ್ಕಿ ಪಡೆಯಬೇಕು. ಇದನ್ನು ಹೊರತು ಪಡಿಸಿ ಮಾರಾಟ ಆಗಿದ್ದು ಕಂಡು ಬಂದಲ್ಲಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿ ಇಂತಹ ಅಕ್ರಮವನ್ನು ಮಟ್ಟ ಹಾಕುವಲ್ಲಿ ಇಲಾಖೆಗೆ ನಮ್ಮ ವೇದಿಕೆ ಸಹಕಾರ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ನಿಯೋಜಿತ ಅಧ್ಯಕ್ಷ ನಾಗರಾಜ್ ಗಾಣಿಗ ತಿಳಿಸಿದರು.

ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿ ಕೊಳ್ಳದೆ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು, ಇಂತಹ ಆಕ್ರಮ ವ್ಯವಹಾರ ನಡೆಯದಂತೆ ಶಾಂತಿಯುತ ಹೋರಾಟ ಮಾಡುವುದು ನಮ್ಮ ಮುಖ್ಯ ಅಜೆಂಡಾವಾಗಿದೆ ಎಂದು ನಾಗರಾಜ್ ಗಾಣಿಗ ಹೇಳಿದರು.

ಹಿರಿಯ ಪತ್ರಕರ್ತ ರಮೇಶ್ ಮೆಂಡನ್ ಸಭೆಯಲ್ಲಿ ಮಾತನಾಡಿ ಅನ್ನ ಭಾಗ್ಯ ಕಣ್ಗಾವಲು ವೇದಿಕೆಯ ಅಗತ್ಯ ಮತ್ತು ಹೋರಾಟದ ರೂಪರೇಷುಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಂಗಮೇಶ್ ತುಮಕೂರು, ಕರುಣಾಕರ ಭದ್ರಾವತಿ, ಪರಮೇಶಿ ಪಾಟೀಲ್, ರಾಜೇ ಗೌಡ ಮಂಡ್ಯ ಹಾಗೂ ಇನ್ನಿತರರು ಉಪಸ್ಥಿತಿರಿದ್ದು. ಮುಂದಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದರು.