ಡೈಲಿ ವಾರ್ತೆ:02 ಜೂನ್ 2023

ಮಂಗಳೂರು: ನಗರಾಭಿವೃದ್ಧಿ ಕಚೇರಿ ಸ್ಟೋರ್ ರೂಮ್ ನಲ್ಲೇ ಸಿಬ್ಬಂದಿ ಆತ್ಮಹತ್ಯೆ

ಮಂಗಳೂರು; ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಸಿಬ್ಬಂದಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಇದೀಗ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಪಡೀಲ್ ನಿವಾಸಿ, ಮೂಡ ಕಚೇರಿ ಸಿಬ್ಬಂದಿ ಕೀರ್ತನ್ ಅಳಪೆ (36) ಎಂದು ಗುರುತಿಸಲಾಗಿದೆ.

ಕೀರ್ತನ್ ತಮ್ಮ ಕಚೇರಿ ಸ್ಟೋರ್ ರೂಮ್ ನಲ್ಲೇ ನೇಣುಬಿಗಿದುಕೊಂಡ‌ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ

ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.