ಡೈಲಿ ವಾರ್ತೆ:02 ಜೂನ್ 2023

5 ಗ್ಯಾರೆಂಟಿ ಜಾರಿ: ಅಧಿಕೃತವಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ – ಇಲ್ಲಿದೆ ವಿವರ

ಬೆಂಗಳೂರು: ಯುವನಿಧಿ ಯೋಜನೆ ಅಡಿ 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿ, ನೋಂದಾಯಿಸಿಕೊಂಡವರಿಗೆ ಪ್ರತಿ ತಿಂಗಳು ಪಧವಿದರರಿಗೆ 3 ಸಾವಿರ ರೂ., ಡಿಪ್ಲೋಮಾದವರಿಗೆ 1.500 ಸಾವಿರ ರೂ. 24 ತಿಂಗಳು ನೀಡುತ್ತೇವೆ. ಆದರೆ ಇದರ ಒಳಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದರೇ ಅವರಿಗೆ ನೀಡುವುದಿಲ್ಲ. ಇವರು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು. ಮತ್ತು ಇದಕ್ಕೆ ಅರ್ಜಿಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ
ಬೆಂಗಳೂರು: ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಸಂಚರಿಸಬಹುದಾಗಿದೆ. ಆದರೆ ರಾಜ್ಯದ ಒಳಗೆ ಮಾತ್ರ. ಆದರೆ ಎಸಿ ಮತ್ತು ಲಗ್ಜುರಿ ಬಸ್ಗಳು ಹೊರತುಪಡಿಸಿ ಈ ತಿಂಗಳು 11ನೇ ತಾರಿಕಿನಿಂದ ಸಂಚರಿಸಬಹುದು.


ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ:
ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮನೆ ಯಜಮಾನಿ ಅಕೌಂಟ್ಗೆ 2000 ಸಾವಿರ ಜಮಾ ಪಕ್ಕಾ:
ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ವಿಚಾರವಾಗಿ ಮಾತನಾಡಿ ಮನೆ ಯಜಮಾನಿಯ ಅಕೌಂಟ್ಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತವೇ. ಹೀಗಾಗಿ ಅವರು ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು. ಮನೆ ಯಜಮಾನಿ ಕಡ್ಡಾಯವಾಗಿ ಆದಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಪಾಸ್ಬುಕ್ ಜರಾಕ್ಸ್ ನೀಡಬೇಕು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.

200 ಯುನಿಟ್ವರೆಗು ಉಚಿತ ವಿದ್ಯುತ್:
ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.